ಸಾವಲ್ಲಿ ಅಂತ್ಯವಾಯ್ತು ಬರ್ತ್​ಡೇ ಸಂಭ್ರಮ; ಮೋಜು-ಮಸ್ತಿಯಲ್ಲಿ ಪ್ರಾಣ ಕಳ್ಕೊಂಡ ವಿದ್ಯಾರ್ಥಿ

Deepak
Published on

ಆನೇಕಲ್: ಜನ್ಮದಿನದ ಸಂಭ್ರಮದ ಸಲುವಾಗಿ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದರೂ ಕೊನೆಗೆ ಅದು ಸಾವಲ್ಲಿ ಅಂತ್ಯವಾಗಿದೆ. ಮೋಜು-ಮಸ್ತಿಯ ಸಂದರ್ಭ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಆನೇಕಲ್​ನಲ್ಲಿ ಈ ಪ್ರಕರಣ ನಡೆದಿದೆ.

ಬಿಟಿಎಮ್ ಬಡಾವಣೆಯ ದೀಪಕ್ ಕುಮಾರ್ (17) ಸಾವಿಗೀಡಾದ ವಿದ್ಯಾರ್ಥಿ. ಈತ ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಈತ ತನ್ನ ಸ್ನೇಹಿತನ ಬರ್ತ್​ಡೇ ಸಲುವಾಗಿ ಇತರ ಸ್ನೇಹಿತರೊಂದಿಗೆ ಬನ್ನೇರುಘಟ್ಟದ ಟಿ.ಕೆ.ಫಾಲ್ಸ್​ಗೆ ಬಂದಿದ್ದ.

ಕಾಲೇಜಿಗೆ ರಜೆ ಹಾಕಿ ಸುಮಾರು 15 ಮಂದಿ ಸ್ನೇಹಿತರು ಬನ್ನೇರುಘಟ್ಟದ ಟಿ.ಕೆ. ಫಾಲ್ಸ್​ಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಮೋಜು-ಮಸ್ತಿಗೆ ಇಳಿದಿದ್ದಾಗ ದೀಪಕ್ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಬನ್ನೇರುಘಟ್ಟ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net