

ದಿಸ್ಪುರ್: ಅಸ್ಸಾಂನಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿರುವಾಗಲೇ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದು ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ.
ಇದನ್ನೂ ಓದಿ: ರೈಲ್ವೆ ಕೆಲಸಕ್ಕೆ ರಾಜೀನಾಮೆ ನೀಡಿದ ವಿನೇಶ್ ಫೋಗಟ್!
ಪಾತ್ಸಲಾದಲ್ಲಿರುವ ಅನುಂದೋರಂ ಬೊರೂವಾ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವಿದ್ಯಾರ್ಥಿಯು ಕಿಟಕಿಯ ಹೊರಗಿನ ಜಾಗದಲ್ಲಿ ನಿಂತಿದ್ದು, ಕೆಳಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಘಟನಾ ಸ್ಥಳದಲ್ಲಿ ಶಿಕ್ಷಕರೂ ಇದ್ದಾರೆ. ವಿದ್ಯಾರ್ಥಿ ಮೂರನೇ ಮಹಡಿಯ ಸಜ್ಜಾದ ಮೇಲೆ ಓಡಿ ನೆಲಕ್ಕೆ ಜಿಗಿದಿದ್ದಾನೆ. ವಿದ್ಯಾರ್ಥಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ.