ಹರಿಯಾಣ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಹರಿಯಾಣ ಮೂಲದ ವಿದ್ಯಾರ್ಥಿ ಆತ್ಮಹತ್ಯೆ
Published on

ಹಾಸನ: ಸಿಂಗ್ ನಗರದ ಡೇರಿ ಸರ್ಕಲ್ ಬಳಿ ರೈಲಿಗೆ ತಲೆ ಕೊಟ್ಟು ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ ಮಂಗಳವಾರ ಮಾಡಿಕೊಂಡಿದ್ದಾನೆ.

ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಹರಿಯಾಣ ಮೂಲದ ವಿದ್ಯಾರ್ಥಿ ಓಷರ್ ಸಿಂಗ್(19) ಆತ್ಮಹತ್ಯೆ ಮಾಡಿಕೊಂಡವ. ಆತ್ಮಹತ್ಯೆಗೆ ಮೊದಲು ಸ್ನೇಹಿತನ ಜತೆ ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದ ಓಷರ್ ಸಿಂಗ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net