ಗೂಗಲ್ ಎಐ ಹಬ್​ಗಾಗಿ ತಮಿಳುನಾಡಿನಲ್ಲೂ ಜಟಾಪಟಿ:  ಸುಂದರ್ ಪಿಚ್ಚೈ ಹೆಸರು ಉಲ್ಲೇಖಿಸಿ ಡಿಎಂಕೆ ವಿರುದ್ಧ ಎಐಎಡಿಎಂಕೆ ವಾಗ್ದಾಳಿ| DMK v/s AIADMK

ವಿಜಯವಾಣಿ (89)
Published on

Chennai: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಸ್ಥಾಪನೆಗೆ ಒಪ್ಪಂದವಾದ ಬಳಿಕ ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಜಟಾಪಟಿ ನಡೆದಿತ್ತು. ರಾಜ್ಯದಲ್ಲಿ ಗೂಗಲ್ ಎಐ ಹಬ್ ತರಲು ರಾಜ್ಯ ಸರ್ಕಾರ ಪ್ರಯತ್ನಿಸಲಿಲ್ಲ ಎಂದು ಪರಸ್ಪರ ವಾಗ್ದಾಳಿ ನಡೆಸಿದ್ದವು. ಅದೇ ರೀತಿ ತಮಿಳುನಾಡಿನಲ್ಲೂ ಡಿಎಂಕೆ ಮತ್ತು ಅಣ್ಣಾ ಡಿಎಂಕೆ(DMK v/s AIADMK) ನಡುವೆ ಜಟಾಪಟಿ ನಡೆದಿದೆ.

ಈ ಕುರಿತು ಮಾತನಾಡಿರುವ ಎಐಐಡಿಎಂಕೆ ನಾಯಕ ಉದಯಕುಮಾರ್, ಜಾಗತಿಕ ತಂತ್ರಜ್ಞಾನ ನಾಯಕತ್ವದೊಂದಿಗೆ ಬಲವಾದ ಸಂಬಂಧಗಳಿದ್ದರೂ ತಮಿಳುನಾಡು ಪ್ರಮುಖ ತಾಂತ್ರಿಕ ಹೂಡಿಕೆಯನ್ನು ಪಡೆಯುವಲ್ಲಿ ವಿಫಲವಾಗಿದೆ. ಗೂಗಲ್ ಸಿಇಒ ಸುಂದರ್ ಪಿಚ್ಚೈ ತಮಿಳುನಾಡಿನವರಾಗಿದ್ದತೂ ಎಐ ಹಬ್ ಅನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಸರ್ಕಾರ ರಾಜ್ಯದಲ್ಲಿ ಅದನ್ನು ಸ್ಥಾಪಿಸಲು ಆಹ್ವಾನಿಸಲು ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಬಹುನಿರೀಕ್ಷಿತ ಯೋಜನೆ ಆಂಧ್ರ ಪಾಲಾಗಿದೆ. ಡಿಎಂಕೆ ಸರ್ಕಾರವು ಅಂತಹ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾದರೆ, ರಾಜ್ಯವು ಸಂಭಾವ್ಯ ಹೂಡಿಕೆಗಳನ್ನು ಕಸಿದುಕೊಳ್ಳುವುದಲ್ಲದೆ, ರಾಜ್ಯದಲ್ಲಿನ ಉದ್ಯೋಗಾವಕಾಶಗಳು ಮತ್ತು ತಾಂತ್ರಿಕ ಪ್ರಗತಿಯ ಮೇಲೂ ಪರಿಣಾಮ ಬೀರುತ್ತದೆ ಹೇಳಿದ್ದಾರೆ.

ಕಳೆದ ವಾರ, ಗೂಗಲ್ ಕ್ಲೌಡ್ ಗ್ಲೋಬಲ್ ಸಿಇಒ ಥಾಮಸ್ ಕುರಿಯನ್ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಂಪನಿಯ ಅತಿದೊಡ್ಡ AI ಮತ್ತು ಡೇಟಾ ಸೆಂಟರ್ ಹಬ್ ಅನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net