'ಸಪ್ತ ಸಾಗರದಾಚೆ ಎಲ್ಲೋ' ಸೈಡ್​ ಬಿ; ರಿಲೀಸ್​ ಡೇಟ್​ನಲ್ಲಿ ಮತ್ತೊಮ್ಮೆ ಬದಲಾವಣೆ?​

Untitled design - 2023-10-16T115144.865
Published on

ಬೆಂಗಳೂರು: ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್​, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್​ ಎ ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿತು. ಸೈಡ್​ ಎ ಬೆನ್ನಲ್ಲೇ ಇದೀಗ ಸೈಡ್​ ಬಿ ರಿಲೀಸ್​ಗೆ ಸಜ್ಜಾಗಿದ್ದು, ಈ ಹಿಂದೆ ಘೋಷಿಸಿದ್ದ ಬಿಡುಗಡೆ ದಿನಾಂಕದಲ್ಲಿ ಕೊಂಚ ಬದಲಾವಣೆಯಾಗಿತ್ತು.

ಸೈಡ್​ ಎ ಬಿಡುಗಡೆಯ ನಂತರ ಸೈಡ್​ ಬಿ ಅಕ್ಟೋಬರ್​ 20 ರಂದು ತೆರೆ ಕಾಣಲಿದೆ ಎಂದು ಹೇಳಿದ್ದ ಚಿತ್ರತಂಡ ತದನಂತರದಲ್ಲಿ ರಿಲೀಸ್ ದಿನಾಂಕವನ್ನು ಅಕ್ಟೋಬರ್​ 27ಕ್ಕೆ ಮುಂದೂಡಿತ್ತು. ಆದ್ರೆ, ಇತ್ತೀಚಿನ ವರದಿಗಳ ಪ್ರಕಾರ, ಬದಲಾಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್​ ಬಿ ಡೇಟ್​ ಅನ್ನು ಈಗ ಮತ್ತೊಮ್ಮೆ ಮುಂದಕ್ಕೆ ಹಾಕಲಾಗಿದೆ ಎಂದು ವದಂತಿಗಳು ತಿಳಿಸಿವೆ.

ಹೇಮಂತ್ ರಾವ್ ನಿರ್ದೇಶಿಸಿದ ಈ ಚಿತ್ರವು ಸೈಡ್ ಬಿ ಸ್ವೀಕೆಲ್ ಅನ್ನು ಹೊಂದಿದ್ದು, ನಾಯಕು-ನಾಯಕಿಯ ಸುಮಧುರ ಪ್ರೀತಿ, ಬಾಂಧವ್ಯತೆಯನ್ನು ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಕಾತರದಿಂದ ಕಾಯುತ್ತಿದೆ.

ಸಿನಿಮಾ ಅಕ್ಟೋಬರ್ 27, 2023 ರಂದೇ ಬಿಡುಗಡೆಯಾಗಲಿ ಎಂದು ರಕ್ಷಿತ್ ಅಭಿಮಾನಿಗಳು ಮತ್ತು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಮೂಡಿಬರಲಿರುವ ಈ ಚಿತ್ರದ ರಿಲೀಸ್​ ದಿನಾಂಕವು ಸದ್ಯ ನವೆಂಬರ್ 10ಕ್ಕೆ ಮುಂದೋಗುವ ಸಾಧ್ಯತೆಗಳು ಹೆಚ್ಚಿದೆ.

ಇದಕ್ಕೆ ಕಾರಣ ಚಿತ್ರತಂಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಬಿಡುಗಡೆಗೊಳಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ಈ ಕುರಿತು ಸದ್ಯ ಯಾವುದೇ ಅಧಿಕೃತ ಮಾಹಿತಿ ಇನ್ನೂ ಘೋಷಣೆಯಾಗಿಲ್ಲ. ಸೈಡ್​ ಬಿ ಭಾಗದಲ್ಲಿ ರಕ್ಷಿತ್ ಶೆಟ್ಟಿ, ಚೈತ್ರಾ ಜೆ.ಆಚಾರ್, ರುಕ್ಮಿಣಿ ವಸಂತ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net