ಡ್ರಾಪ್​​​ ನೆಪವೊಡ್ಡಿ ಮನೆಗೆ ತೆರಳುತ್ತಿದ್ದವಳನ್ನ ಬೈಕ್​​​ನಲ್ಲಿ​​​ ಕೂರಿಸಿಕೊಂಡ ಅಪರಿಚಿತ; 12 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ..!

kkkk
Published on

ಮಧ್ಯಪ್ರದೇಶ: ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.


5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಸಂಜೆ ಹೊತ್ತು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿ ಆಕೆಗೆ ಡ್ರಾಪ್​​​ ಕೊಡುತ್ತೇನೆ ಬೈಕ್​ನಲ್ಲಿ ಕುಳಿತುಕೊ ಎಂದಿದ್ದಾನೆ.


ಆದರೆ ಆರೋಪಿ ಅಂಜನಿ ಕೇವತ್​(23) ಬಾಲಕಿ ಬೈಕ್​ನಲ್ಲಿ ಕುಳಿತ ಬಳಿಕ, ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.


ಬಾಲಕಿ ತನಗಾದ ಲೈಂಗಿಕ ಕಿರುಕುಳವನ್ನ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದು, ಕುಟುಂಬಸ್ಥರು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಕೇವತ್ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ನಂತರದಲ್ಲಿ ಉತ್ತರ ಪ್ರದೇಶದ ಗಡಿಗೆ ಸಮೀಪದಲ್ಲಿರುವ ಆಕೆಯ ಗ್ರಾಮದ ಬಳಿ ಬಾಲಕಿಯನ್ನ ಡ್ರಾಪದದ ಮಾಡಿದ್ದು, ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ.


ಬಾಲಕಿಯ ಖಾಸಗಿ ಭಾಗಗಳಿಗೆ ಗಾಯಗಳಾಗಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಆರೋಪಿ ಘಟನೆಯ ಬಳಿಕ ಸ್ಥಳದಿಂದ ಎಸ್ಕೇಪ್​ ಆಗಿದ್ದು, ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net