

ಮುಂದುವರಿದ ಭಾಗ...
ಒಂದು ಪಕ್ಷ ಎಲ್ಲ ಆಮೆಗಳು ಬೇರೆ ಬೇರೆ ದಿವಸ ಮೊಟ್ಟೆ ಇಟ್ಟು ಮರಿ ಮಾಡಿದರೆ, ಭಕ್ಷಕಗಳಿಗೆ ಪ್ರತಿ ದಿವಸವೂ ಭರ್ಜರಿ ಊಟ ಸಿಗುತ್ತದೆ. ಆಗ ಆಮೆಯ ಮರಿಗಳು ಬದುಕುವುದೇ ಇಲ್ಲ, ಹುಟ್ಟಿದ ಎಲ್ಲ ಮರಿಗಳು ಸತ್ತುಹೊಗಿ ಆಮೆಯ ಸಂತತಿಯೇ ಅಳಿಸಿಹೋಗುತ್ತದೆ. ಇಂತಹ ವಿಷಯವನ್ನು ಅರಿತಿರುವ ಜೈವಿಕ ವ್ಯವಸ್ಥೆ, ಆಮೆಗಳು ಒಂದೇ ದಿವಸ ಮೊಟ್ಟೆ ಇಟ್ಟು ನಂತರ ಒಂದೇ ದಿವಸದಲ್ಲಿ ಮರಿಗಳಾಗುವ ಹಾಗೆ ಮಾಡುತ್ತದೆ. ಅಂತಹ ಜೈವಿಕ ವ್ಯವಸ್ಥೆಯನ್ನು ದೇವರು ಎನ್ನುತ್ತೇವೆ.
ಕೆರೆ ಅಥವಾ ಸಮುದ್ರದ ದಡದಲ್ಲಿ ವಾಸಿಸುವ ಆಮೆ, ಏಡಿ, ಮೊಸಳೆ ಮತ್ತು ಇತರ ಚಿಕ್ಕ ಚಿಕ್ಕ ಜೀವಿಗಳಿಗೆ ಸಮುದ್ರ ದಂಡೆಯ ಮರಳು ಬಹಳ ಮುಖ್ಯ. ಇಂತಹ ವ್ಯವಸ್ಥಿತವಾದ ಸುಂದರ ಪರಿಸರದ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆದರೆ ಈ ಜೀವಿಗಳಿಗೆ ಎಷ್ಟು ತೊಂದರೆ ಆಗಬಹುದು? ಒಂದನ್ನೊಂದು ತಿಂದು ಬದುಕುವ ಜೀವಿಗಳಿಗೆ ಊಟವೇ ಸಿಗುವುದಿಲ್ಲ! ಆದರೆ ಕೆಲವು ದೇಶಗಳಲ್ಲಿ ಆಮೆಯ ಚಿಪ್ಪನ್ನು ಅಲಂಕಾರಿಕ ವಸ್ತುಗಳನ್ನಾಗಿ ಮಾಡಲು ಈ ಆಮೆಗಳನ್ನು ಬೇಟೆಯಾಡುತ್ತಿದ್ದಾರೆ. ಆದ್ದರಿಂದ ಇವುಗಳ ಸಂಖ್ಯೆ ಇಳಿಮುಖವಾಗಿ ಕೆಲವು ಉಪಜಾತಿ ಅಳಿವಿನಂಚಿನಲ್ಲಿವೆ.