

ಮುಂದುವರಿದ ಭಾಗ...
ನಾವು ಮನುಷ್ಯರು ಹುಟ್ಟಿದ ಊರಿನಲ್ಲಿ ಹತ್ತು ಹದಿನೈದು ವರ್ಷಗಳ ಕಾಲ ಸಮಯ ಕಳೆದಿದ್ದರೆ ಅದನ್ನು ನಮ್ಮ ಜೀವನದ ಕೊನೆಯವರೆಗೂ ಮರೆಯಲಾಗುವುದಿಲ್ಲ. ಅಂತಹ ಹುಟ್ಟೂರಿಗೆ ಏನೋ ಒಂದು ರೀತಿಯ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ಅದಕ್ಕೆ ಉತ್ತರ ಕೊಡುವುದು ಕಷ್ಟ. ಅದೇ ರೀತಿ ನಾಯಿಗಳು ತಾನು ಹುಟ್ಟಿದ ಊರು ಮತ್ತು ಸಾಕಿದ ಯಜಮಾನನ್ನು ಎಷ್ಟು ದೂರದಿಂದಲಾದರೂ ಹುಡುಕಿಕೊಂಡು ಬರುತ್ತವೆ. ಅದೇ ರೀತಿ ಪ್ರತಿಯೊಂದು ಜೀವಿಯು ಕೂಡ ತಾನು ಜನಿಸಿದ ಸ್ಥಳವನ್ನು ಮರೆಯುವುದಿಲ್ಲ. ಅದಕ್ಕೆ ಹಲವಾರು ಜೈವಿಕ ಕಾರಣಗಳಿರುತ್ತವೆ.
ಕಡಲಾಮೆಗಳ ಈ ರೀತಿಯ ಸಾಮೂಹಿಕ ವಲಸೆಗೆ ವಿಜ್ಞಾನ ಇನ್ನೂ ಉತ್ತರವನ್ನು ನಿಖರವಾಗಿ ಕಂಡುಕೊಂಡಿಲ್ಲ. ಅವುಗಳ ವಲಸೆಗೆ ಅಲೆಗಳ ಚಲನೆ, ನೀರಿನ ಮಿಡಿತ, ನೀರಿನ ಗುಣಮಟ್ಟ, ಭೂಮಿಯ ವಿದ್ಯುತ್ಕಾಂತೀಯ ಶಕ್ತಿ ಮುಂತಾದವು ಕಾರಣವಾಗಿರಬಹುದು ಎಂದು ಊಹಿಸಲಾಗುತ್ತಿದೆ.