ಜಿಲ್ಲಾಸ್ಪತ್ರೆಯನ್ನೇ ಮನೆ ಮಾಡಿಕೊಂಡ ಬೀದಿ ನಾಯಿಗಳು! ವಾರ್ಡ್ ಒಳಗಿನ ರಕ್ತದ ಚೀಲದೊಂದಿಗೆ ನಾಯಿಗಳ ಆಟ | Hospital

Hospital
Published on

Hospital: ಉತ್ತರ ಪ್ರದೇಶದ ಮಹೋಬಾ ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿ ನಾಯಿಗಳು ಮನೆ ಮಾಡಿಕೊಂಡಿದೆ. ವಾರ್ಡ್ ಒಳಗೆ ನಾಯಿಗಳು ರಕ್ತದ ಚೀಲದೊಂದಿಗೆ ಆಟವಾಡುತ್ತಿರುವುದು ಕಂಡುಬಂದ ನಂತರ ಇಲ್ಲಿನ ಆರೋಗ್ಯ ಸೇವೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಆಸ್ಪತ್ರೆಯಲ್ಲಿ ನಾಯಿಗಳ ಬಗ್ಗೆ ಎಷ್ಟು ಭಯವಿದೆಯೆಂದರೆ, ಅವು ವಾರ್ಡ್‌ಗಳ ಒಳಗೆ ರಕ್ತದ ಚೀಲಗಳೊಂದಿಗೆ ಆಟವಾಡುತ್ತಿದ್ದರೂ ಯಾರೂ ಅವುಗಳನ್ನು ಓಡಿಸಲು ಬರಲಿಲ್ಲ. ಕೆಲವೊಮ್ಮೆ ಅವು ಔಷಧಿ ಬಾಟಲಿಗಳೊಂದಿಗೆ, ಪಾಲಿಥಿನ್ ಮತ್ತು ಖಾಲಿ ಇಂಜೆಕ್ಷನ್ ಸಿರಿಂಜ್‌ಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ವಾರ್ಡ್‌ಗಳ ಸುತ್ತಲೂ ಓಡುತ್ತಿದ್ದರೂ ಯಾವ ಸಿಬ್ಬಂದಿಗಳು ಅವುಗಳನ್ನು ಓಡಿಸುವ ಪ್ರಯತ್ನ ಮಾಡಲಿಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಕಾಟದಿಂದ ರೋಗಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಆವರಣದಲ್ಲಿ ನಾಯಿಗಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ವೇಳೆ ಅವುಗಳ ಭಯ ಇನ್ನಷ್ಟು ಹೆಚ್ಚಾಗುತ್ತದೆ. ರೋಗಿಗಳಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರೂ ತೊಂದರೆಗೀಡಾಗಿದ್ದಾರೆ ಮತ್ತು ಸಿಬ್ಬಂದಿ ಅಸಹಾಯಕರಾಗಿದ್ದಾರೆ.

ರೋಗಿಗಳ ಹಾಸಿಗೆಗಳ ಮೇಲೆ ನಾಯಿಗಳು ಹತ್ತುವುದು ಸಾಮಾನ್ಯ ಸಂಗತಿಯಾಗಿದೆ. ರೋಗಿಗಳು ತಮ್ಮನ್ನು ಕಚ್ಚಬಹುದೆಂಬ ಭಯದಲ್ಲಿರುತ್ತಾರೆ. ಚಿಕಿತ್ಸೆಗಾಗಿ ಬಂದಿರುವ ಅನಾರೋಗ್ಯ ಪೀಡಿತರು ನಾಯಿಗಳಿಂದ ಇತರ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಂಖ್ಯೆಯೂ ಕಡಿಮೆ ಇದ್ದು, ಭದ್ರತೆಗೆ ಯಾವುದೇ ಕಾವಲುಗಾರರಾಗಲಿ ಅಥವಾ ಪೊಲೀಸ್‌ ಸಿಬ್ಬಂದಿಯಾಗಲಿ ಇಲ್ಲ. ರಾತ್ರಿ ವೇಳೆ ಇಲ್ಲಿ ಕೆಲವೇ ಸಿಬ್ಬಂದಿ ಇರುತ್ತಾರೆ, ಅವರು ಎಲ್ಲಾ ವಾರ್ಡ್‌ಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಸ್ವಚ್ಛತೆಯ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಕೊಳಕು ಸ್ನಾನಗೃಹಗಳು, ವಾಸನೆ ಬೀರುವ ವಾರ್ಡ್‌ಗಳು ಮತ್ತು ಈಗ ನಾಯಿಗಳ ಭಯ, ಇವೆಲ್ಲದರ ನಡುವೆ ರೋಗಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ನಿರ್ಲಕ್ಷ್ಯ ವಹಿಸಿದ ಉದ್ಯೋಗಿಗಳಿಗೆ ನೋಟಿಸ್ ನೀಡುವುದಾಗಿ ಸಿಎಂಎಸ್ ಡಾ. ಪಿ.ಕೆ. ಅಗರ್ವಾಲ್ ಹೇಳಿದ್ದಾರೆ. ಕಾವಲುಗಾರರು ಕರ್ತವ್ಯಕ್ಕೆ ನಿಯೋಜಿಸುವಂತೆ ಸಿಎಂಒಗೆ ಬೇಡಿಕೆ ಸಲ್ಲಿಸಲಾಗಿದೆ. (ಏಜೆನ್ಸೀಸ್​)

̤̤̤

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net