ಸಾಮೂಹಿಕ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾದ 8 ಭಾರತೀಯರಿಗೆ ಜೀವಾವಧಿ ಶಿಕ್ಷೆ | California

California
Published on

California: ಗ್ಯಾಂಗ್ ಸಂಬಂಧಿತ ಹಿಂಸಾಚಾರ, ಅಪಹರಣ ಮತ್ತು ಚಿತ್ರಹಿಂಸೆಗಾಗಿ ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿರುವ 8 ಭಾರತೀಯ ಪ್ರಜೆಗಳಿಗೆ ಜಾಮೀನು ನಿರಾಕರಿಸಲಾಗಿದ್ದು, ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಶುಕ್ರವಾರ (ಜು.18) ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿಸಲಾದ ಎಲ್ಲಾ 8 ವ್ಯಕ್ತಿಗಳು ಭಾರತೀಯರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಆರೋಪಿಗಳಿಂದ ಚಿತ್ರಹಿಂಸೆಗೊಳಗಾದ ಬಲಿಪಶು ಸುಳಿವು ನೀಡಿದ ನಂತರ ವ್ಯಕ್ತಿಗಳನ್ನು ಬಂಧಿಸಲಾಯಿತು. ಜೂನ್ 19 ರಂದು, ಭಾರತೀಯ ಸಮುದಾಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಆರೋಪಿಗಳು ಬಲಿಪಶುವನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು.

ಸುಳಿವು ಸಿಕ್ಕಿದ ನಂತರ ಕಳೆದ ಶುಕ್ರವಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳು ಹ್ಯಾಂಡ್‌ಗನ್‌ಗಳು, ಅಸಾಲ್ಟ್ ರೈಫಲ್ ಹೊಂದಿದ್ದನ್ನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net