ಊರಿನ ಹೊರ ವಲಯದಲ್ಲಿ ಕಾಣಿಸಿಕೊಂಡ ವಿಚಿತ್ರ ಜೀವಿಗಳು!; ಆತಂಕಗೊಂಡ ಗ್ರಾಮದ ಜನ: ಪ್ರಾಣಿಗಳ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು? | Animals

dk (37)
Published on

ಆಂಧ್ರಪ್ರದೇಶ: ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಜನರಿಗೆ ಇಂದು (ಗುರುವಾರ) ವಿಚಿತ್ರ ಪ್ರಾಣಿಗಳ(Animals) ದರ್ಶನವಾಗಿದೆ. ಅಲ್ಲದೆ, ಈ ಜೀವಿಗಳಿಂದ ಜನರು ಭಯಭೀತಿಗೊಂಡು ಕೆಲ ಕಾಲ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಠಿಯಾಗಿತ್ತು. ಇದಕ್ಕೆ ಕಾರಣ ಹುಲಿಮರಿಗಳ ವದಂತಿ.

ಹೌದು, ಇಲ್ಲಿನ ಸಗ್ಗೂರು, ಕೃಷ್ಣಾವರಂ ಭಾಗದ ಜನರು ಮುಂಜಾನೆ ಜಮೀನಿಗೆ ಕಾಲಿಡುತ್ತಿದ್ದಂತೆ ಕೆಲವರಿಗೆ ವಿಚಿತ್ರ ಜೀವಿಗಳು ಕಾಣಿಸಿಕೊಂಡಿವೆ. ಇದರಿಂದ ಭಯಗೊಂಡು ಜಮೀನಿಂದ ಪಾರಾರಿಯಾಗಿ ಊರೊಳಗೆ ಬಂದು ಹುಲಿ ಮರಿಗಳು ಬಂದಿವೆ ಎಂದು ವದಂತಿ ಹಬ್ಬಿಸಿದ್ದಾರೆ. ಬಳಿಕ ಜನ ಅರಣ್ಯ ಇಲಾಖಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವುದರೊಳಗೆ, ಹುಲಿಮರಿಗಳನ್ನು ನೋಡಲು ಎರಡು ಗ್ರಾಮದ ಸಾವಿರಾರು ಜನರು ಜಮಾಯಿಸಿದ್ದಾರೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ದೊಡ್ಡದಾದ ಬಲೆಗಳನ್ನು ತಂದಿದ್ದಾರೆ.

ಭಯಕ್ಕೆ ಕಾರಣ?

ಇದಕ್ಕೆ ಕಾರಣ, ಎರಡು ದಿನಗಳ ಮುಂಚೆ ಕಾಡಾನೆಗಳ ಹಿಡಿಯುವ ಸಲುವಾಗಿ ಬಲೆ ಬೀಸಲಾಗಿತ್ತು. ಕಾಡಾನೆ ಬದಲಾಗಿ ಚಿರತೆಯೊಂದು ಬಲೆಗೆ ಸಿಲುಕಿ ಮೃತಪಟ್ಟಿತ್ತು. ಅಲ್ಲದೆ, ಸರ್ಕಾರಿ ಬಸ್​ಗೆ ಹುಲಿಯೊಂದು ಡಿಕ್ಕಿ ಹೊಡೆದು ಕಾಡಿಗೆ ಹೊಡಿದೆ ಎಂದು ಬಸ್​ ಕಂಡಕ್ಟರ್​ ಹೇಳಿಕೆ ಜಿಲ್ಲಾದ್ಯಂತ ವ್ಯಾಪಿಸಿತ್ತು. ಹೀಗಾಗಿ, ಎರಡು ಊರಿನ ಜನರ ಆತಂಕಕ್ಕೆ ಕಾರಣವಾಗಿತ್ತು.

ಹುಲಿಮರಿಯಲ್ಲ ಕಾಡುಬೆಕ್ಕು!

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಸ್ಥಳ ಮತ್ತು ಪ್ರಾಣಿಗಳು ಪರಿಕ್ಷೀಸಿದ ನಂತರ ಹುಲಿ ಮರಿಗಳಲ್ಲ. ಕಾಡುಬೆಕ್ಕಿನ ಮರಿ ಎಂದು ಧೃಢಿಕರಿಸಿದ್ದಾರೆ. ಬಳಿಕ ಗ್ರಾಮದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಎಲ್ಲಿಯೂ ಸ್ಥಳಾಂತರಿಸುವುದು ಬೇಡ. ಮರಿಗಳ ತಾಯಿ ತಾನಾಗಿಯೇ ಬಂದು ಮರಿಗಳನ್ನು ಕರೆದೊಯ್ಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net