

ಮುಂಬೈ: ಬಾಲಿವುಡ್ನ ಭಾಯ್ಜಾನ್, ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್ ಖಾನ್ (Salman Khan) ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಕೆಲಸ ಬ್ಯುಸಿಯಿರುವ ಸಲ್ಮಾನ್, ಕೆಲ ತಿಂಗಳ ಹಿಂದೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ಕಿ ಶೂಟೌಟ್ ವಿಚಾರವಾಗಿ ಸದ್ದು ಮಾಡಿದ್ದರು. ಇದೀಗ ಮದುವೆ ವಿಚಾರವಾಗಿ ಸಲ್ಮಾನ್ ಖಾನ್ ಹೆಸರು ಸೌಂಡ್ ಮಾಡುತ್ತಿದ್ದು, ಭಾಯ್ಜಾನ್ನ ಕೈ ಹಿಡಿಯುವ ನಟಿ ಇವರೇನಾ ಎಂದು ಅನುಮಾನ ಮೂಡಲು ಶುರುವಾಗಿದೆ.
2023ರಲ್ಲಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಗದರ್ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದ ನಟಿ ಅಮೀಷಾ ಪಟೇಲ್ (Ameesha Patel) ಕೆಲ ದಿನಗಳ ಹಿಂದೆ ಅಭಿಮಾನಿಗಳು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದು, ಸಲ್ಮಾನ್ ಖಾನ್ (Salman Khan) ಜೊತೆಗಿನ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಬಿ ಟೌನ್ ಅಂಗಳದಲ್ಲಿ ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀಷಾ ಪಟೇಲ್, ಸಲ್ಮಾನ್ ಅವರನ್ನು ಮದುವೆಯಾಗುವಂತೆ ಅಭಿಮಾನಿಗಳು ಕೇಳುತ್ತಿರುವುದು ನಿಜಕ್ಕೂ ಒಳ್ಳೆಯದು. ಇಬ್ಬರೂ ಸಮರ್ಥರು ನೋಡಲು ತುಂಬಾ ಚೆನ್ನಾಗಿ ಕಾಣುತ್ತೀರಿ, ಮದುವೆಯಾಗಿ ಒಳ್ಳೆಯ ಮಕ್ಕಳನ್ನು ಹೊಂದಿ ಎಂದು ಅಭಿಮಾನಿಗಳು ಹೇಳಿದ್ದು, ಜನರು ಸುಂದರ ವ್ಯಕ್ತಿಗಳನ್ನು ಒಟ್ಟಿಗೆ ನೋಡಲು ಇಷ್ಟಪಡುತ್ತಾರೆ. ಈ ಹಿಂದೆ ಹೃತಿಕ್ರನ್ನು ಮದುವೆಯಾಗುವಂತೆ ಅಭಿಮಾನಿಗಳು ಹೇಳಿದ್ದರು ಎಂದು ನಟಿ ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.
2024ರಲ್ಲಿ ನಟಿ ಆಮೀಷಾ ಪಟೇಲ್ ಟ್ವಿಟರ್ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅಭಿಮಾನಿಯೊಬ್ಬರು ಸಲ್ಮಾನ್ ಖಾನ್ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅಮೀಶಾ, ಇದು ಯಾವುದಾದರೂ ಚಿತ್ರದ ಪ್ರಾಜೆಕ್ಟ್‌ಗಾಗಿ ಅಭಿಮಾನಿಗಳು ಕೇಳಿದ್ದಾರೆ ಎಂದು ನಾನು ಭಾವಿಸಿದ್ದೆ.. ಆದರೆ ನಾವು ಇಬ್ಬರೂ ಇನ್ನೂ ಒಂಟಿಯಾಗಿದ್ದೇವೆ.. ಆದ್ದರಿಂದ ಮದುವೆಯಾದರೇ ಸುಖವಾಗಿರುಬಹುದು ಎಂಬುದು ಫ್ಯಾನ್ಸ್ ಅಭಿಪ್ರಾಯವಾಗಿತ್ತು ಎಂದು ನಟಿ ಅಮೀಷಾ ಪಟೇಲ್ ಹೇಳಿದ್ದಾರೆ.