

ಬೆಂಗಳೂರು : ಚುನಾವಣೆ ವೇಳೆ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ದೇಶದ ಎಲ್ಲೆಡೆ ‘ಸ್ಟಾಪ್ ವೋಟ್ ಚೂರಿ’ ಅಭಿಯಾನ ಕೈಗೊಂಡಿದ್ದಾರೆ. ಇದಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಸಾಥ್ ಕೊಟ್ಟಿದೆ.
ಶನಿವಾರ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮತ್ತು ಪದಾಧಿಕಾರಿಗಳು ಮೆಜೆಸ್ಟಿಕ್‌ನಲ್ಲಿ ಸ್ಟಾಪ್ ವೋಟ್ ಚೂರಿ ಸ್ಟಿಕರ್‌ನ್ನು ಅಂಟಿಸುವ ಮೂಲಕ ಮತಗಳ್ಳತನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು.