ಖಾತಾ ಆಂದೋಲನ ಸ್ಥಗಿತಗೊಳಿಸಿ

sor
ಸೊರಬ ತಾಲೂಕು ಕಚೇರಿ ಎದುರು ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮುಷ್ಕರ ನಡೆಸಿ ಶಿರಸ್ತೇದಾರ್ ಎಸ್. ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದರು. ಎಸ್.ಎಚ್. ವಿನಯ್, ಸುಧೀರ್ ಕಾನಡೆ, ಆರ್.ವೀರೇಂದ್ರ, ಸಮೀರ್ ಕಳಾವಂತ್ ಇತರರಿದ್ದರು.
Published on

ಸೊರಬ: ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ತಾಲೂಕು ಘಟಕದ ಪದಾಧಿಕಾರಿಗಳು ಮುಷ್ಕರ ನಡೆಸಿದರು.

ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ ಮತ್ತು ಅಲ್ಮೆರಾ, ಮೊಬೈಲ್, ಪ್ರಿಂಟರ್, ಸ್ಕ್ಯಾನರ್ ಒದಗಿಸಬೇಕು ಎಂದು ಗ್ರಾಮಾಡಳಿತ ಅಧಿಕಾರಿಗಳ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಯಶವಂತರಾಜ್ ಆಗ್ರಹಿಸಿದರು.

ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡಬೇಕು. ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪ್ರಮಾಣ ಪತ್ರ ನೀಡಿ ಇ-ಪೌತಿ ಖಾತಾ ಆಂದೋಲನ ಬಿಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಆಡಳಿತಾಧಿಕಾರಿಗಳ ವಾರ್ಷಿಕ ವೇತನ ತಡೆದು, ಹೊರಡಿಸಿರುವ ದಂಡನಾ ಆದೇಶ ಹಿಂಪಡೆಯಬೇಕು. ಪೊಲೀಸ್ ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು ನಿರ್ವಹಿಸುವ ಕಂದಾಯ ಇಲಾಖೆ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲ ನೌಕರರಿಗೆ ಒಂದು ತಿಂಗಳ ವೇತನ ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿ ಶಿರಸ್ತೇದಾರ್ ಎಸ್. ನಿರ್ಮಲಾ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಎಸ್.ಎಚ್. ವಿನಯ್, ಸುಧೀರ್ ಕಾನಡೆ, ಆರ್.ವೀರೇಂದ್ರ, ಸಮೀರ್ ಕಳಾವಂತ್, ಶ್ರೀಕಾಂತ್, ಕೆ.ಮಂಜಪ್ಪ, ಲೋಹಿತ್‌ಕುಮಾರ್, ಇಮಾಂ ಖಾಸಿಂ, ಡಿ.ಪಿ.ಮಂಜಪ್ಪ, ಭಾರತಿ ಪಾಟೀಲ್, ಯಲಪ್ಪ ಚಿಗರಿ, ಗಿರಿಮಲ್ಲಪ್ಪ ಉಳ್ಳಗಡ್ಡಿ, ಉಮೇಶ್, ಜಂಗಪ್ಪ ಗೌಡ ಬಿರಾದಾರ್, ರವಿಕುಮಾರ್, ಮಲ್ಲಪ್ಪ ಗದ್ದಿ, ಸಂಗೀತಾ, ದಾನೇಶ್ ಚಂಬಾರ್, ಮುತ್ತುಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net