

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯ ನಡುವೆ ಹೂಡಿಕೆದಾರರು ಬ್ಯಾಂಕಿಂಗ್, ಮೆಟಲ್ ಮತ್ತು ಎಫ್‌ಎಂಸಿಜಿ ಸ್ಟಾಕ್‌ಗಳಿಂದ ದೂರ ಸರಿಯುವುದರೊಂದಿಗೆ ಈಕ್ವಿಟಿ ಮಾನದಂಡಗಳಾದ ಬಿಎಸ್ಇ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ವ್ಯಾಪಕ ನಷ್ಟ ಅನುಭವಿಸಿದವು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 670.93 ಅಂಕ ಅಥವಾ ಶೇಕಡಾ 0.93 ರಷ್ಟು ಕುಸಿದು 71,355.22 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 725.11 ಅಂಕಗಳು ಅಥವಾ ಶೇಕಡಾ 1 ರಷ್ಟು ಕುಸಿದು 71,301.04 ಕ್ಕೆ ತಲುಪಿತ್ತು.
ನಿಫ್ಟಿ ಸೂಚ್ಯಂಕವು 197.80 ಅಂಕಗಳು ಅಥವಾ ಶೇಕಡಾ 0.91 ರಷ್ಟು ಕುಸಿದು 21,513 ಕ್ಕೆ ತಲುಪಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಟಿಸಿ, ನೆಸ್ಲೆ, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಮಹೀಂದ್ರಾ ಮತ್ತು ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಹಿನ್ನಡೆ ಅನುಭವಿಸಿದವು.
ಎಚ್‌ಸಿಎಲ್ ಟೆಕ್ನಾಲಜೀಸ್, ಪವರ್ ಗ್ರಿಡ್, ಸನ್ ಫಾರ್ಮಾ, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್ ಮತ್ತು ಟೈಟಾನ್ ಷೇರುಗಳು ಲಾಭ ಗಳಿಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು. ಜಪಾನ್‌ನ ನಿಕ್ಕಿ ರಜೆ ಇತ್ತು.
ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಏರಿಕೆ ಕಂಡಿದ್ದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 1,696.86 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ತಿಳಿಸಿದೆ.
ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಶುಕ್ರವಾರ 178.58 ಅಂಕಗಳ ಏರಿಕೆ ಕಂಡು 72,026.15 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕ 52.20 ಅಂಕಗಳ ಏರಿಕೆ ಕಂಡು 21,710.80 ಕ್ಕೆ ತಲುಪಿತ್ತು.
ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ: 37,377.95 (328.60 ಅಂಕ ನಷ್ಟ)ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ: 43,819.39 (159.35 ಅಂಕ ನಷ್ಟ)ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ: 46,894.35 (501.95 ಅಂಕ ನಷ್ಟ)ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ: 15,342.55 (96.30 ಅಂಕ ನಷ್ಟ) ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕ: 14,298.20 (84.20 ಅಂಕ ನಷ್ಟ)