ಷೇರು ಮಾರುಕಟ್ಟೆ ಇಳಿಮುಖ

ShareMarket
Published on

ಮುಂಬೈ: ಮಿಶ್ರ ಜಾಗತಿಕ ಪ್ರವೃತ್ತಿಯ ಮಧ್ಯೆ ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ, ತೈಲ, ಅನಿಲ ಕಂಪನಿಗಳ ಷೇರುಗಳ ಮಾರಾಟಕ್ಕಿಳಿದ ಪರಿಣಾಮವಾಗಿ ಷೇರು ಮಾರುಕಟ್ಟೆ ಬುಧವಾರ ಇಳಿಮುಖವಾಗಿತ್ತು. ದಿನದ ವಹಿವಾಟಿನ ನಡುವೆ 330.23 ಅಂಕ ಕುಸಿದು 83,382.28ಕ್ಕೆ ತಲುಪಿದ್ದ ಸೆನ್ಸೆಕ್ಸ್ 176.43 ಅಂಕ ಕುಸಿದು 83,536.08ಕ್ಕೆ ಸ್ಥಿರಗೊಂಡಿತು.

ನಿಫ್ಟಿ 46.40 ಅಂಕ ಇಳಿಕೆಯಾಗಿ 25,476.10ಕ್ಕೆ ಕೊನೆಗೊಂಡಿತು. ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಭಾರತ್ ಎಲೆಕ್ಟ್ರಾನಿಕ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದವು. ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್ ಷೇರುಗಳು ಲಾಭ ಗಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.51ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 70.51 ಡಾಲರ್ ಆಗಿದೆ.

ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 26.12 ಕೋಟಿ ರೂ. ಮೌಲ್ಯದ ಷೇರುಗಳನ್ನು ಹಿಂತೆಗೆದುಕೊಂಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,366.82 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net