

HMPV: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ HMPV- ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಇದೀಗ ಭಾರತಕ್ಕೂ ಲಗ್ಗೆಯಿಟ್ಟಿದ್ದು, ದೇಶದ ಜನಸಾಮಾನ್ಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಬಹಳ ವೇಗವಾಗಿ ಹಬ್ಬಿರುವ ಈ ಸೋಂಕು, ಪತ್ತೆಯಾದ ಎರಡೇ ದಿನಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿದೆ. ಮೊದಲ ದಿನವೇ ದೇಶದಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ 2 ಶಿಶುಗಳಲ್ಲಿ ಮತ್ತು ಗುಜರಾತ್ನ ಹಸುಗೂಸಿನಲ್ಲಿ ಪತ್ತೆಯಾಯಿತು. ಇಂದು ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟು 7 ಜನರಲ್ಲಿ ವೈರಸ್ ಇರುವುದು ದೃಢವಾಗಿದೆ.
ಮಹಾಮಾರಿ ಕೊರೊನಾಗೆ ಜನ್ಮ ನೀಡಿದ್ದ ಚೀನಾ, ಈಗ ಅದರಂತೆಯೇ ಮತ್ತೊಂದು ವೈರಸ್ಗೆ ಕಾರಣವಾಗಿರುವುದು ಸದ್ಯ ಜನರಲ್ಲಿ ಭಯದ ಭೀತಿ ಮೂಡಿಸಿದೆ. ಚೀನಾದಲ್ಲಿ ವೇಗದ ಹಬ್ಬುವಿಕೆಗೆ ಈಗಾಗಲೇ ಅಲ್ಲಿನ ಆಸ್ಪತ್ರೆ ಮತ್ತು ಸ್ಮಶಾನಗಳಲ್ಲಿ ಜಾಗವೇ ಸಿಗದಂತ ಸನ್ನಿವೇಶ ಎದುರಾಗಿರುವುದು ತೀರ ಆತಂಕಕಾರಿ. ಈ ಸುದ್ದಿ ಭಾರತೀಯರಿಗೆ ತಿಳಿದು ಇನ್ನೂ ಮೂರು ದಿನವೂ ಸರಿಯಾಗಿ ಕಳೆದಿಲ್ಲ. ಅಷ್ಟರೊಳಗೆ ದೇಶದಲ್ಲಿ ಒಟ್ಟು 7 ಪ್ರಕರಣಗಳು ಪತ್ತೆಯಾಗಿರುವುದು ಇದೀಗ ಎಚ್ಚರಿಕೆಯ ಗಂಟೆಯಾಗಿದೆ.
ಕರ್ನಾಟಕ-02
ಗುಜರಾತ್-01
ತಮಿಳುನಾಡು-02
ಮಹಾರಾಷ್ಟ್ರ-02 (ಒಟ್ಟು 7 HMP ಸೋಂಕಿತರು)
ಎಚ್ಎಂಪಿವಿ ವೈರಸ್ ಸೋಂಕು ಬಹಳ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ಜನರು ಆತಂಕಗೊಂಡಿದ್ದಾರೆ. ಈ ವಿಷಯ ತೀವ್ರ ಚರ್ಚೆಯಾಗುತ್ತಿದ್ದಂತೆ ಲಾಕ್ಡೌನ್ ಜಾಲತಾಣಗಳಲ್ಲಿ ಟ್ರೆಂಡಿಂಗ್ ಪಟ್ಟಿ ಸೇರಿತು. HMP ವೈರಸ್ ಹರಡುವಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ತಜ್ಞರು, ಇಲ್ಲಿ ಯಾರೂ ಸಹ ಭಯಭೀತರಾಗಬೇಡಿ ಮತ್ತು ಹೆಚ್ಚು ಚಿಂತಿಸಬೇಡಿ. ಗಾಬರಿಗೊಳ್ಳಲು ಯಾವುದೇ ಕಾರಣವಿಲ್ಲ. ಇದರ ಬದಲಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ತಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆ ಜತೆಗೆ ಒಂದಷ್ಟು ಆಹಾರಗಳ ಸೇವನೆಯಿಂದ ದೂರವಿರುವುದು ಒಳಿತು.
ಸಿಹಿತಿಂಡಿಗಳು, ಸಕ್ಕರೆ ಪಾನೀಯಗಳು ಮತ್ತು ಸಂಸ್ಕರಿಸಿದ ತಿಂಡಿಗಳಂತಹ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಮತ್ತು ನಿಮ್ಮ ದೇಹವು ಸೋಂಕಿನ ವಿರುದ್ಧ ಹೋರಾಡಲು ನಿಶಕ್ತಿ ಆಗುವಂತೆ ಮಾಡುತ್ತದೆ.
2. ಮಸಾಲೆಯುಕ್ತ ಆಹಾರಗಳು
ಮಸಾಲೆಯುಕ್ತ ಆಹಾರಗಳು ಗಂಟಲಿನ ಕಿರಿಕಿರಿ ಮತ್ತು ಕೆಮ್ಮು ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಆರೋಗ್ಯ ಹದಗೆಡಿಸಬಹುದು. ಇದು ಹೊಟ್ಟೆಯಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.
ಕರಿದ ತಿಂಡಿಗಳು ಮತ್ತು ಜಿಡ್ಡಿನ ತ್ವರಿತ ಆಹಾರಗಳು ಅನಾರೋಗ್ಯಕರ ಕೊಬ್ಬುಗಳಲ್ಲಿ ಅಧಿಕವಾಗಿದ್ದು, ಇವು ಜೀರ್ಣಕಾರಿ ಅಸ್ವಸ್ಥತೆ ಮತ್ತು ಉರಿಯೂತವನ್ನು ಉಂಟುಮಾಡಬಹುದು. ಇದರಿಂದ ಸೋಂಕಿನ ವಿರುದ್ಧ ನಿಮ್ಮ ಚೇತರಿಕೆ ಮತ್ತಷ್ಟು ನಿಧಾನಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
4. ಮದ್ಯ ಸೇವನೆ
ಮದ್ಯಪಾನ ಸೇವನೆ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ನಿಮ್ಮ ದೇಹವನ್ನು ಗುಣಪಡಿಸಲು ಜಲಸಂಚಯನದ ಅಗತ್ಯವಿರುವಾಗ ಪ್ರತಿರೋಧಕವಾಗಿ ಕಾಡುತ್ತದೆ.
5. ಡೈರಿ ಉತ್ಪನ್ನ
ಉಸಿರಾಟದ ಸಮಸ್ಯೆ, ಅನಾರೋಗ್ಯದ ಸಮಯದಲ್ಲಿ ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿತಗೊಳಿಸುವುದು ಉತ್ತಮ ಸಲಹೆ.