

Tamil Movies: ಕಳೆದ ವರ್ಷ ಸಿನಿಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ ಭಾರತದ ಪ್ರಮುಖ ಭಾಷೆಯ ಚಿತ್ರರಂಗದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವುದರ ಜತೆಗೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವಲ್ಲಿ ಮೇಲುಗೈ ಸಾಧಿಸಿತು. ಒಂದಷ್ಟು ಸಿನಿ ಇಂಡಸ್ಟ್ರಿಗಳು ಮಾತ್ರ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಸೋಲಿನ ಮೂಲಕ ಅಪಾರ ನಷ್ಟವನ್ನು ಎದುರಿಸಿದ್ದು ಬಿಟ್ಟರೆ ಉಳಿದ ಚಿತ್ರರಂಗಗಳು ಒಳ್ಳೆಯ ಲಾಭವನ್ನು ಕಂಡಿದೆ.
ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಚಿತ್ರಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದರೆ, ಬಾಲಿವುಡ್ ಮತ್ತು ಮಾಲಿವುಡ್ನ ಬಹುತೇಕ ಸಿನಿಮಾಗಳು ಚಿತ್ರರಸಿಕರ ಮನಗೆಲ್ಲುವಲ್ಲಿ ವಿಫಲಗೊಂಡು, ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲುಂಡಿತು. ಇದರಿಂದ ಆಯಾ ಚಿತ್ರರಂಗಕ್ಕೆ ಭಾರೀ ನಷ್ಟವೂ ಉಂಟಾಯಿತು. ಸದ್ಯ ಹೊಸ ವರ್ಷಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಹಾಗೂ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಲು ಆಯಾ ಚಿತ್ರರಂಗದವರು ಸಜ್ಜಾಗಿದ್ದು, ಈ ಸಾಲಿನಲ್ಲಿ ಕಾಲಿವುಡ್ ಒಂದು ಹೆಜ್ಜೆ ಮುಂದಿದೆ.
2025ರ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಚಿತ್ರರಂಗದಿಂದ ಬಹುನಿರೀಕ್ಷಿತ ಸಿನಿಮಾಗಳನ್ನು ತೆರೆಗೆ ತರಲು ನಿರ್ಧರಿಸಿರುವ ನಿರ್ಮಾಪಕರು, ಈಗಾಗಲೇ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಿದ್ದಾರೆ. ಅಸಲಿಗೆ ಯಾವ ಸ್ಟಾರ್ ನಟರ ಸಿನಿಮಾಗಳು ಈ ಪಟ್ಟಿಯಲ್ಲಿದೆ? ಯಾರೆಲ್ಲಾ ಈ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಪಾತ್ರವರ್ಗ: ನಟ ವಿಶಾಲ್, ಸಂತಾನಂ, ಅಂಜಲಿ, ವರಲಕ್ಷ್ಮಿ ಶರತ್‌ಕುಮಾರ್, ಸೋನು ಸೂದ್, ಮಣಿವಣ್ಣನ್ (ದಿವಂಗತ ನಟ), ಸುಬ್ಬರಾಜು, ರಾಜೇಂದ್ರನ್ ಮುಂತಾದವರ ತಾರಾಗಣ.
ನಿರ್ದೇಶಕ: ಸುಂದರ್. ಸಿ
ಜಾನರ್: ಆ್ಯಕ್ಷನ್-ಕಾಮಿಡಿ
ರಿಲೀಸ್ ಡೇಟ್: ಜನವರಿ 12, 2025
ಪಾತ್ರವರ್ಗ: ಆಕಾಶ್ ಮುರಳಿ, ಅದಿತಿ ಶಂಕರ್, ಆರ್. ಶರತ್‌ಕುಮಾರ್, ಖುಷ್ಬು ಸುಂದರ್, ಪ್ರಭು, ಕಲ್ಕಿ ಕೊಚ್ಲಿನ್, ಶಿವ ಪಂಡಿತ್.
ನಿರ್ದೇಶಕ: ವಿಷ್ಣುವರ್ಧನ್
ಜಾನರ್: ರೋಮ್ಯಾಂಟಿಕ್ ಥ್ರಿಲ್ಲರ್
ರಿಲೀಸ್ ಡೇಟ್: ಜನವರಿ 14, 2025
ಪಾತ್ರವರ್ಗ: ಅರುಣ್ ವಿಜಯ್, ರೋಶನಿ ಪ್ರಕಾಶ್, ಸಮುದ್ರಕನಿ, ಜಾನ್ ವಿಜಯ್, ಮಿಸ್ಕಿನ್, ರಾಧಾ ರವಿ ಮುಂತಾದವರು.
ನಿರ್ದೇಶಕ: ಬಾಲಾ
ಜಾನರ್: ಆ್ಯಕ್ಷನ್, ಡ್ರಾಮಾ
ರಿಲೀಸ್ ಡೇಟ್: ಜನವರಿ 10, 2025
ಪಾತ್ರವರ್ಗ: ಶೇನ್ ನಿಗಮ್, ಕಲೈಯರಸನ್, ನಿಹಾರಿಕಾ ಕೊನಿಡೇಲಾ, ಐಶ್ವರ್ಯಾ ದತ್ತಾ, ಕರುಣಾಸ್, ಪಾಂಡ್ಯರಾಜನ್ ಮುಂತಾದವರ ತಾರಾಗಣ.
ನಿರ್ದೇಶಕ: ವಾಲಿ ಮೋಹನ್ ದಾಸ್
ಜಾನರ್: ಆ್ಯಕ್ಷನ್
ರಿಲೀಸ್ ಡೇಟ್: ಜನವರಿ 10, 2025
ಪಾತ್ರವರ್ಗ: ಜಯಂ ರವಿ, ನಿತ್ಯಾ ಮೆನೆನ್, ಯೋಗಿ ಬಾಬು, ವಿನಯ್ ರೈ, ಜಾನ್ ಕೊಕ್ಕೆನ್, ಲಾಲ್, ಜಾನ್ ಕೊಕ್ಕೆನ್, ಮನೋ
ನಿರ್ದೇಶಕ: ಕಿರುತಿಗ ಉದಯನಿಧಿ
ಜಾನರ್: ರೋಮ್ಯಾಂಟಿಕ್, ಕಾಮಿಡಿ
ರಿಲೀಸ್ ಡೇಟ್: ಜನವರಿ 14, 2025 (ಏಜೆನ್ಸೀಸ್).