ಗೋಕಾಕ: ಯುವ ಪೀಳಿಗೆ ದೇಶದ ಭವಿಷ್ಯವಾಗಿದ್ದು, ಶಿಣದೊಂದಿಗೆ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಬೇಕು ಎಂದು ಜೆಎಸ್ಎಸ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಯು.ಎಂ.ಶಾಗೋಟಿ ಹೇಳಿದರು.
ನಗರದ ಲಕ್ಷ$್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಂಸತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಜಗತ್ತಿನಾದ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳಿವೆ. ಕಠಿಣ
ಪರಿಶ್ರಮದಿಂದ ಧನಾತ್ಮಕ ಚಿಂತನೆಯೊಂದಿಗೆ ಪ್ರಯತ್ನಶಿಲರಾಗಿ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಾಚಾರ್ಯ ಡಾ.ಐ.ಎಸ್.ಪವಾರ, ಉಪನ್ಯಾಸಕರಾದ
ಎಸ್.ಎಲ್.ಬಯ್ಯಾರ, ಆರ್.ಎ.ಜಮಾದಾರ, ಸಿ.ಆರ್.ಕಮ್ಮಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಭೀಮವ್ವ ಕಾಳಿ, ಶಾರದಾ ಹುಲಿಕಟ್ಟಿ, ಜಯಶ್ರೀ ಹುಣಶ್ಯಾಳ ಇತರರಿದ್ದರು. ಎಸ್.ವೈ.ಖಾನಟ್ಟಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಂಗನಾಳ ಮತ್ತು ಐಶ್ವರ್ಯಾ ಕೆ. ನಿರೂಪಿಸಿದರು. ಡಾ.ಮನೀಷಾ ಪೂಜಾರಿ ವಂದಿಸಿದರು.