ಅತಿ ಶ್ರೀ ಸರ್ವಪಕ್ಷಗಳ ಸಭೆ ಕರೆಯಿರಿ

ವಿವಿಧ ಬೇಡಿಕೆಗೆ ಆಗ್ರಹಿಸಿ ಮಾಜಿ ಸಂಸದ ಉಗ್ರಪ್ಪ ನೇತೃತ್ವದಲ್ಲಿ ಯಾದಗಿರಿಯಲ್ಲಿ ಸೋಮವಾರ ವಾಲ್ಮೀಕಿ ಸಮಾಜದ ಮುಖಂಡರು ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಗೊಲ್ಲಪಲ್ಲಿಯ ವರದಾನಂದೇಶ್ವರ ಸ್ವಾಮೀಜಿ, ಗೌಡಪ್ಪಗೌಡ ಅಲ್ದಾಳ, ಸಾಹೇಬಗೌಡ ನಾಯಕ, ಅಧ್ಯ ಮಾರೆಪ್ಪ ನಾಯಕ ಇತರರಿದ್ದರು.
ವಿವಿಧ ಬೇಡಿಕೆಗೆ ಆಗ್ರಹಿಸಿ ಮಾಜಿ ಸಂಸದ ಉಗ್ರಪ್ಪ ನೇತೃತ್ವದಲ್ಲಿ ಯಾದಗಿರಿಯಲ್ಲಿ ಸೋಮವಾರ ವಾಲ್ಮೀಕಿ ಸಮಾಜದ ಮುಖಂಡರು ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಗೊಲ್ಲಪಲ್ಲಿಯ ವರದಾನಂದೇಶ್ವರ ಸ್ವಾಮೀಜಿ, ಗೌಡಪ್ಪಗೌಡ ಅಲ್ದಾಳ, ಸಾಹೇಬಗೌಡ ನಾಯಕ, ಅಧ್ಯ ಮಾರೆಪ್ಪ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಉಗ್ರಪ್ಪ ಒತ್ತಾಯ
  • ಶೇ.56 ಮೀಸಲಾತಿ ಅನ್ವಯ ಹುದ್ದೆ ಭರ್ತಿ ಮಾಡಿ
ಯಾದಗಿರಿ: ಶೇ.56 ಮೀಸಲಾತಿ ನೀಡುವುದು, ಖಾಲಿ ಇರುವ ಎಲ್ಲ ಹುದ್ದೆ ಭರ್ತಿ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಮಾಜಿ ಸಂಸದ ವಿ.ಎಸ್​. ಉಗ್ರಪ್ಪ ಆಗ್ರಹಿಸಿದರು.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರದಲ್ಲಿ ಹೆಚ್ಚಿಸಿರುವ ಮೀಸಲಾತಿ ಸೆಡೂಲ್​ 9ಕ್ಕೆ ಸೇರಿಸಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಶೇ.50ಕ್ಕೂ ಹೆಚ್ಚು ಮಿಸಲಾತಿ ನೀಡಬೇಕು ಹಾಗೊಂದು ವೇಳೆ ರ್ನಿಲಕ್ಷ ವಹಿಸಿದರೆ ಉಪ ಚುನಾವಣೆ ನಂತರ ಬೆಂಗಳೂರಿನಲ್ಲಿ ಅಹೋರಾತ್ರಿ ಆರಂಭಿಸಲಾಗುವುದು. ಅವಕಾಶ ವಂಚಿತ ಸಮುದಾಯಗಳಿಗೆ ಸನ್ನಿವೇಶಕ್ಕನುಗುಣವಾಗಿ ನೇಮಕಾತಿ ಮತ್ತು ಶೈಣಿಕವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದರು.
ಎಸ್​ಟಿಗೆ ಸೇರಿದ ಸಮುದಾಯಗಳಲ್ಲಿ ಶೇ.5 ಇದ್ದ ಮೀಸಲಾತಿ ಶೇ 7ಕ್ಕೆ ಹೆಚ್ಚಾಗಿದ್ದು ಹೋರಾಟದ ಫಲವೇ ಹೊರತು ಇನ್ನಾವುದು ಅಲ್ಲ. ರಾಜ್ಯದಲ್ಲಿ ನಮ್ಮೆಲ್ಲರ ಹೋರಾಟದಿಂದ ಜಸ್ಟಿಸ್​ ನಾಗಮೋಹನ್​ ದಾಸ್​ ಸಮಿತಿ ನೇಮಕ ಮಾಡಿ, ಅಧ್ಯಯನ ನಡೆಸಿ ವರದಿ ಸಲ್ಲಿಸಲಾಯಿತು. ಅದರಲ್ಲಿ ಅನುಸೂಚಿತ ಪಂಗಡ, ಜಾತಿಗಳಿಗಾಗಿ ಸರ್ಕಾರದ ಉದ್ಯೋಗಳಲ್ಲಿ ಅವರ ಸಾರತೆ ಜಾಸ್ತಿಯಾಗಿರಿಲ್ಲದಿರುವುದು ಸ್ಯಾವಿದ್ದು, ಇದು ಅವರ ಜನಗಣತಿ ಪ್ರಕಾರ ಮೀಸಲಾತಿ ಬೇಕನ್ನುವುದು ವರದಿ ಹೇಳುತ್ತದೆ ಎಂದು ಅವರು ವಿವರಣೆ ನೀಡಿದರು.
ಗೊಲ್ಲಪಲ್ಲಿಯ ವರದಾನಂದೇಶ್ವರ ಸ್ವಾಮೀಜಿ, ಜಿಲ್ಲಾಧ್ಯ ಗೌಡಪ್ಪಗೌಡ ಅಲ್ದಾಳ, ಸಾಹೇಬಗೌಡ ನಾಯಕ, ಉಕ ಅಧ್ಯ ಮಾರೆಪ್ಪ ನಾಯಕ ಮಗ್ದಂಪುರ, ಹಣಮಂತ ನಾಯಕ, ರಾಮು ನಾಯಕ, ನರಸಪ್ಪ ನಾಯಕ ಸಿದ್ದಲಿಂಗಪ್ಪ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.
ಕೊಟ್ಟ ಮಾತು ತಪ್ಪಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾಗಕ್ಕೆ (ಕಲಬುರಗಿ) ಬಂದಾಗ ಕೋಲಿ, ಗೊಲ್ಲರ ಸಮುದಾಯ ಸೇರಿ ಇನ್ನೂ ಅನೇಕ ಜಾತಿಗಳನ್ನು ಎಸ್​ಟಿಗೆ ಸೇರಿಸುವುದಾಗಿ ಹೇಳಿದ್ದರು. ಮಿಸ್ಟರ್​ ಮೋದಿ ಅವರು ಮನ್​ ಕಿ ಬಾತ್​ ಮೂಲಕ ಮಕ್ಕಳ, ಮಹಿಳೆಯರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ, ಆದರೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಉಗ್ರಪ್ಪ ಆರೋಪಿಸಿದರು.
ಸಿದ್ದರಾಮಯ್ಯ ಅವರೆ ಸಾಮಾಜಿಕ ನ್ಯಾಯ ಎಲ್ಲಿ ?
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯ ಎಲ್ಲಿ ಹೋಯಿತು. ನಿಮ್ಮ ಸ್ನೇಹಿತನಾಗಿ ವಿನಂತಿಸಿಕೊಳ್ಳುವುದೆನೆಂದರೆ ಸರ್ವ ಪಗಳ ಸಭೆ ಕರೆದು ದೆಹಲಿಗೆ ಹೋಗಿ ವರದಿ ಸಲ್ಲಿಸಿ ನ್ಯಾಯ ಒದಗಿಸಿಕೊಡಿ ಎಂದು ಜರಿದರು. 36 ಜನ ಎಸ್​ಸಿ ಶಾಸಕರು, 18 ಎಸ್​ಟಿ ಶಾಸಕರಿದ್ದಾರೆ. ನಿಮ್ಮ ಜವಾಬ್ದಾರಿ ಮರೆತು ಆಯಾ ಸಮುದಾಯಗಳಿಗೆ ಮೋಸ ಮಾಡುತ್ತಿದ್ದೀರಾ, ನೀವು ತೆಗೆದುಕೊಂಡ ಮತಗಳಿಗೆ ನ್ಯಾಯ ಒದಗಿಸಿಕೊಡಿ, ಕಷ್ಟದಲ್ಲಿ ಇದ್ದಾಗ ಒಬ್ಬ ಶಾಸಕ, ಸಂಸದರೂ ಸಹ ಬಾಯಿ ಬಿಡಲ್ಲ ಎಂದು ಉಗ್ರಪ್ಪ ಕಿಡಿ ಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net