ಹೂಲಿಕಟ್ಟಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಮಠದ ಜಾತ್ರೆ ಅಂಗವಾಗಿ ಶನಿವಾರ ಕುಮಾರ ಸ್ವಾಮೀಜಿ ಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಪತ್ರಯ್ಯ ಹುಲಕಂತಿ, ಯಲ್ಲಪ್ಪ ಗೋಣಿ ಇತರರಿದ್ದರು.
ಮಮದಾಪುರ: ಧರ್ಮಸಭೆ ಮೂಲಕ ಯುವ ಜನಾಂಗಕ್ಕೆ ಆಚಾರ&ವಿಚಾರ, ಸಂಸತಿ ಪರಿಚಯಿಸುತ್ತಿರುವ ಕಾರ್ಯ ಶ್ಲಾನೀಯ ಎಂದು ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮೀಜಿ ಹೇಳಿದರು.
ಸಮೀಪದ ಹೂಲಿಕಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವ ಜನರು ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಮಠ&ಮಂದಿರಗಳಲ್ಲಿ ನಡೆಯುವ ಶಿವ ಭಜನೆ, ಕೀರ್ತನೆ, ಪ್ರವಚನ ಸೇರಿ ಸತ್ಸಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ಬದುಕಿನಲ್ಲಿ ಮಹಾತ್ಮರ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.