ಔರಾದ್ ತಾಲೂಕಿನ ಸಂತಪುರನ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಕೆಡಿಆರ್ಡಿಪಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪಿಎಸ್ಐ ದಿನೇಶ್ ಎಂ. ಟಿ ಮಾತನಾಡಿದರು. ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ, ಧನರಾಜ ಮುಸ್ತಾಪುರೆ, ಶಿವಕುಮಾರ ಮುಳ್ಳುಕೇರಿ, ಶಿವಲಿಂಗ ಹೇಡೆ, ರವಿ, ಸತೀಶ ನಾಗುರೆ,ಬಸವರಾಜ ಪೂಜಾರಿ ಇತರರಿದ್ದರು.
ಔರಾದ್: ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಪಿಎಸ್ಐ ದಿನೇಶ ಎಂ.ಟಿ. ಹೇಳಿದರು.
ತಾಲೂಕಿನ ಸಂತಪುರನ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಾಸ್ಥ ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹದಿಹರೆಯದ ವಿದ್ಯಾರ್ಥಿಗಳು ಹಾಗೂ ಯುವ ಜನತೆಯಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾದ ಪ್ರಮುಖ ಸಾಮಾಜಿಕ ಕಾರ್ಯಕ್ರಮ ಇದಾಗಿದ್ದು, ಮದ್ಯಪಾನ, ಧೂಮಪಾನದಿಂದ ದೂರವಿರುವ ಮೂಲಕ ಮನೆಯಲ್ಲಿ ಒಳ್ಳೆಯ ವಾತಾವರಣವಿರುವಂತೆ ನೋಡಿಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಿವಕುಮಾರ ಮುಳ್ಳುಕೇರಿ, ಮಾತನಾಡಿ, ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಸಮಯಕ್ಕೆ ಸರಿಯಾಗಿ ಉತ್ತಮವಾದ ಆಹಾರ ಸೇವಿಸಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸಮೃದ್ಧಿ ಜೀವನ ನಡೆಸುತಿದ್ದರು. ಇಂದಿನ ಕಾಲದಲ್ಲಿ ಯುವ ಜನತೆ ಕೆಟ್ಟ ಚಟಗಳಿಗೆ ದಾಸರಾಗಿ ಬದುಕು ಕೆಡಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ, ಸಮಾಜ ಸೇವಕ ಧನರಾಜ ಮುಸ್ತಾಪುರೆ, ಎಎಸ್ಐ ರವಿ, ಉಪನ್ಯಾಸಕ ಸತೀಶ್ ನಾಗುರೆ, ಕೃಷಿ ಅಧಿಕಾರಿ ಬಸವರಾಜ ಪೂಜಾರಿ ಇತರರಿದ್ದರು. ಅಶ್ವಿನಿ ಸ್ವಾಗತ ಮಾಡಿದರು. ಶಿವಪುತ್ರ ಧರಣಿ ನಿರೂಪಣೆ ಮಾಡಿದರು..