ಆಪತ್ಕಾಲಕ್ಕೆ ಯಶಸ್ವಿನಿ ಯೋಜನೆ ಸಂಜೀವಿನಿ

ಜೇವರ್ಗಿಯ ಡಿಸಿಸಿ ಬ್ಯಾಂಕ್​ನಲ್ಲಿ ಯಶಸ್ವಿನಿ ಕಾರ್ಡ್​ ನೋಂದಣಿ ಮಾಡಿದ ಸಹಕಾರಿ ಸಂಗಳ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಬಸವರಾಜ ಪಾಟೀಲ್​, ಪ್ರಭು ಜಾಧವ್​, ಶ್ರೀಶೈಲಗೌಡ ಕರಕಿಹಳ್ಳಿ, ಶಾಂತಗೌಡ ಪಾಟೀಲ್​, ಪ್ರಶಾಂತ ವಾಡೇಕರ್​ ಇದ್ದರು.
ಜೇವರ್ಗಿಯ ಡಿಸಿಸಿ ಬ್ಯಾಂಕ್​ನಲ್ಲಿ ಯಶಸ್ವಿನಿ ಕಾರ್ಡ್​ ನೋಂದಣಿ ಮಾಡಿದ ಸಹಕಾರಿ ಸಂಗಳ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಬಸವರಾಜ ಪಾಟೀಲ್​, ಪ್ರಭು ಜಾಧವ್​, ಶ್ರೀಶೈಲಗೌಡ ಕರಕಿಹಳ್ಳಿ, ಶಾಂತಗೌಡ ಪಾಟೀಲ್​, ಪ್ರಶಾಂತ ವಾಡೇಕರ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ಪಾಟೀಲ್​ ನರಿಬೋಳ ಹೇಳಿಕೆ
  • ಸಹಕಾರಿ ಸಂಗಳ ಕಾರ್ಯದರ್ಶಿಗಳಿಗೆ ಸತ್ಕಾರ
ಜೇವರ್ಗಿ: ಪ್ರತಿ ರೈತರು ಸಹಕಾರಿ ಸಂದಲ್ಲಿ ಸದಸ್ಯತ್ವ ಮಾಡಿಸಿಕೊಂಡು ಯಶಸ್ವಿನಿ ಕಾರ್ಡ್​ ಪಡೆದುಕೊಳ್ಳಬೇಕು. ರೈತರ ಆಪತ್ಕಾಲಕ್ಕೆ ಯಶಸ್ವಿನಿ ಆರೋಗ್ಯ ಕವಚವಿದ್ದಂತೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ಬಸವರಾಜ ಪಾಟೀಲ್​ ನರಿಬೋಳ ಹೇಳಿದರು.
ಡಿಸಿಸಿ ಬ್ಯಾಂಕ್​ನಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರಿ ಸಂಗಳ ಕಾರ್ಯದರ್ಶಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂ ಯೋಜನೆ ಇದಾಗಿದ್ದು, ಸದಸ್ಯತ್ವ ಹೊಂದಿದ ರೈತರಿಗೆ 5 ಲಕ್ಷದ ವರೆಗೆ ಆರೋಗ್ಯ ಚಿಕಿತ್ಸೆಗಾಗಿ ಈ ಯೋಜನೆಯಡಿ ಪ್ರಾಯೋಜನವಿದೆ. ಕಳೆದ ಬಾರಿ 6 ಸಾವಿರ ಫಲಾನುಭವಿಗಳಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ 12,500 ರೈತರು ಯಶಸ್ವಿನಿ ನೋಂದಣಿ ಮಾಡಿಸಿಕೊಂಡಿದ್ದಾರೆ. 10 ಲಕ್ಷಕ್ಕೂ ಅಧಿಕ ವಂತಿಗೆ ಹಣ ಬ್ಯಾಂಕ್​ಗೆ ಜಮೆ ಮಾಡಲಾಗಿದೆ ಎಂದರು.
ಗಂವ್ಹಾರ, ಗುಡೂರ (ಎಸ್​.ಎ), ನೇದಲಗಿ, ಬಳಬಟ್ಟಿ, ಕೆಲ್ಲೂರಿನಲ್ಲಿ ಹೆಚ್ಚು ನೋಂದಣಿ ಮಾಡಿದ ಸಹಕಾರಿ ಸಂಗಳ ಕಾರ್ಯದರ್ಶಿಗಳನ್ನು ಸತ್ಕರಿಸಲಾಯಿತು. ಪ್ರಮುಖರಾದ ಶಾಂತಗೌಡ ಪಾಟೀಲ್​, ಪ್ರಶಾಂತ ವಾಡೇಕರ್​, ಚಂದ್ರಾಮ ಪೂಜಾರಿ, ಲಿಂಗನಗೌಡ ಪಾಟೀಲ್​, ಪ್ರಭು ಜಾಧವ್​, ಶ್ರೀಶೈಲಗೌಡ ಕರಕಿಹಳ್ಳಿ, ಮಹಾಂತೇಶ ಪವ್ಹಾರ್​, ಆರ್​.ಡಿ.ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net