ಕೆಂಭಾವಿ ಸಮೀಪ ಫತ್ತೇಪೂರ ಗ್ರಾಮದ ಬಲಭೀಮೇಶ್ವರ ದೇವಸ್ಥಾನದ 3ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಬಸವರಾಜ ಶಾಸಿ ಪ್ರವಚನ ನೀಡಿದರು. ಅಂಬರೀಶ ನಗನೂರ, ಈಶ್ವರ ಬಡಿಗೇರ ಇತರರಿದ್ದರು.
ಕೆಂಭಾವಿ: ಧರ್ಮದ ಉತ್ತಮ ದಾರಿಯೇ ನಮ್ಮ ಜೀವನಕ್ಕೆ ನೆಲೆಯಾಗಿದ್ದು, ಗುರುಗಳ ಮತ್ತು ದೇವರ ಮೇಲೆ ನಿರಂತರ ಭಕ್ತಿಯಿಂದ ನಡೆದುಕೊಳ್ಳುವದೇ ನಮ್ಮ ನಿತ್ಯ ಕಾಯಕವಾಗಬೇಕು ಎಂದು ಶಹಾಪುರ ವಂದಾಲಿ ಹಿರೇಮಠದ ಶ್ರೀ ಬಸವರಾಜ ಶಾಸಿ ಹೇಳಿದರು.
ಪುರಸಭೆ ವ್ಯಾಪ್ತಿಯ ಫತ್ತೇಪೂರ ಗ್ರಾಮದಲ್ಲಿ ಬಲಭೀಮೇಶ್ವರ ದೇವಸ್ಥಾನದ 3ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಿತ್ಯ ಗುರುಗಳ ಸ್ಮರಣೆ ಮತ್ತು ದೇವರ ಧ್ಯಾನ ಮಾಡುವುದರೊಂದಿಗೆ ಸದಾಚಾರಿಗಳಾಗಿ ಬದುಕಬೇಕು. ನಾವು ಸಂಪಾದಿಸಿದ ಹಣದಲ್ಲಿ ಕಿಂಚಿತ್ತಾದರೂ ಅನ್ಯರಿಗೆ ದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬಸವರಾಜ ಭಂಟನೂರ, ಹಳ್ಳೇರಾವ ಕುಲಕರ್ಣಿ, ಅಂಬರೀಶ ನಗನೂರ, ಈಶ್ವರ ಬಡಿಗೇರ ಅವರಿಂದ ಸಂಗೀರ ಕಾರ್ಯಕ್ರಮ ನಡೆಯಿತು. ಅರ್ಚಕ ರಾಮಣ್ಣ ಪೂಜಾರಿ ನೇತೃತ್ವದಲ್ಲಿ ಬಲಭೀಮೇಶ್ವರನಿಗೆ ವಿಶೇಷ ಪೂಜೆ ನಡೆಯಿತು.