ಯುದ್ಧ ವಿರೋಧಿಸಿ ವಿಶ್ವ ರಂಗಭೂಮಿ ದಿನಾಚರಣೆ 27 ರಂದು

,
,
Published on

ಕಲಬುರ್ಗಿ: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಮಾ.27 ರಂದು ನಗರದ  ಕಾರ್ಪೋರೇಷನ್ ಗಾರ್ಡನ್ ನಲ್ಲಿ ಯುದ್ಧ ವಿರೋಧಿಸಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಲಾಗುತ್ತಿದೆ. ಅಂದು ಸಾಯಂಕಾಲ 5:00 ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯನ್ನು ರಂಗಕರ್ಮಿ, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಆವಿಷ್ಕಾರ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯೆ ವಿಶಾಲಾಕ್ಷಿ ದೇಸಾಯಿ ಪ್ರಾಸ್ತಾವಿಕ ಮಾತನಾಡುವರು. ವೇದಿಕೆ ಜಿಲ್ಲಾ ಸಂಚಾಲಕಿ ಎ.ಅಶ್ವಿನಿ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಕಿರು ನಾಟಕ ಪ್ರದರ್ಶನ, ರಂಗ ಗೀತೆಗಳ ಗಾಯನ ಹಾಗೂ ಏಕಪಾತ್ರಾಭಿನಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಆವಿಷ್ಕಾರ ಸದಸ್ಯ ಮಡಿವಾಳಪ್ಪ ಹೇರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net