ಕಾಂಗ್ರೆಸ್​ ಪಕ್ಷ ಸಂಘಟನೆ ಬಲಪಡಿಸಲು ಶ್ರಮಿಸಿ

ಬಸವಕಲ್ಯಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಪಕ್ಷದ ಸಂಘಟನಾ ನೃಜನ್​ ಅಭಿಯಾನ ಕಾರ್ಯಕ್ರಮವನ್ನು ಎಐಸಿಸಿ ವೀಕ ರಾಜೇಶ್​ ಲಿಲೋಥಿಯಾ ಉದ್ಘಾಟಿಸಿದರು. ಭೀಮರಾವ್​ ಪಾಟೀಲ್​,  ನೀಲಕಂಠ ರಾಠೋಡ್​, ಧನರಾಜ ತಾಳಂಪಳ್ಳಿ, ಮಿರ್​ ಅಜರ್​ಅಲಿ ನವರಂಗ್​ ಇತರರಿದ್ದರು.
ಬಸವಕಲ್ಯಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಪಕ್ಷದ ಸಂಘಟನಾ ನೃಜನ್​ ಅಭಿಯಾನ ಕಾರ್ಯಕ್ರಮವನ್ನು ಎಐಸಿಸಿ ವೀಕ ರಾಜೇಶ್​ ಲಿಲೋಥಿಯಾ ಉದ್ಘಾಟಿಸಿದರು. ಭೀಮರಾವ್​ ಪಾಟೀಲ್​, ನೀಲಕಂಠ ರಾಠೋಡ್​, ಧನರಾಜ ತಾಳಂಪಳ್ಳಿ, ಮಿರ್​ ಅಜರ್​ಅಲಿ ನವರಂಗ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ ರಾಜೇಶ್​ ಸಲಹೆ
  • ಕಲ್ಯಾಣದಲ್ಲಿ ಸಂಟನಾ ಸೃಜನ್​ ಅಭಿಯಾನ
ಬಸವಕಲ್ಯಾಣ: ಕಾಂಗ್ರೆಸ್​ ಪಕ್ಷದ ಸಂಘಟನೆಯನ್ನು ಬೂತ್​ ಹಾಗೂ ಗ್ರಾಮ ಮಟ್ಟದಿಂದ ಮತ್ತಷ್ಟು ಬಲಪಡಿಸಬೇಕಿದ್ದು, ಕಾರ್ಯಕರ್ತರು ಮತ್ತು ಸ್ಥಳಿಯ ನಾಯಕರು ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಪಕ್ಷಕ್ಕೆ ಹೆಚ್ಚಿನ ಬಲ ತುಂಬಲು ಸಾಧ್ಯ ಎಂದು ಎಐಸಿಸಿ ವೀಕ ರಾಜೇಶ್​ ಲಿಲೋಥಿಯಾ ಹೇಳಿದರು.
ನಗರದ ವರ್ಷಾ ಕಲ್ಯಾಣ ಮಂಟಪದಲ್ಲಿ ಬ್ಲಾಕ್​ ಕಾಂಗ್ರೆಸ್​ ಸಮಿತಿಯಿಂದ ಕಾಂಗ್ರೆಸ್​ ಶುಕ್ರವಾರ ಆಯೋಜಿಸಿದ್ದ ಸಂಘಟನಾ ಸೃಜನ್​ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲರ ವಿಶ್ವಾಸ ಗಳಿಸಿಕೊಂಡು ಮುನ್ನಡೆ ಯಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್​ ಸದಸ್ಯ ಭೀಮರಾವ್​ ಪಾಟೀಲ್​, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ, ಉಸ್ತುವಾರಿಗಳಾದ ಜ್ಯೋತಿ ಮರಗೋಳ, ರಮೇಶ್​ ಮರಗೋಳ, ಜಿಲ್ಲಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಮಹಮ್ಮದ್​ ಶಮಿ ಕಾಂಗ್ರೆಸ್​ ಪಕ್ಷದ ಸಂಘಟನೆ ಕುರಿತು ಯುವ ಕಾಂಗ್ರೆಸ್​, ಮಹಿಳಾ ಘಟಕ, ಎನ್​ಎಸ್​ಯುಐ ಘಟಕ ಸೇರಿ ಎಲ್ಲ ಘಟಕಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ನೀಲಕಂಠ ರಾಠೋಡ್​ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಪ್ರಮುಖರಾದ ಮಿರ್​ ಅಜರ್​ಅಲಿ ನವರಂಗ್​, ಬಸವರಾಜ ಸ್ವಾಮಿ, ಅರ್ಜುನ್​ ಕನಕ, ಮನೋಹರ ಮೈಸೆ, ರವೀಂದ್ರ ಬೋರಳೆ, ಡಿ.ಕೆ.ದಾವೂದ್​, ತಹೇಸಿನ್​ ಅಲಿ ಜಮಾದಾರ್​, ಜೀತು ಮಾಸ್ಟರ್​, ಸಿದ್ರಾಮ ಕಾಮಣ್ಣ, ಆನಂದ ಪಾಟೀಲ್​, ಅನ್ನಪೂರ್ಣ ಅಂಬಾರಾಯ, ಶಿವಕುಮಾರ ಶೆಟಕಾರ, ಅನುಸೂಯ ಮಂಠಾಳಕರ್​, ಸುರೇಶ ಮೋರೆ, ದತ್ತು ಬೆಂಡೆ, ಸಂದೀಪ ಬುಯೆ, ರೈಸೋದ್ದಿನ್​, ಮಲ್ಲಿಕಾರ್ಜುನ ಬೊಕ್ಕೆ, ನಾಗನಾಥ ಮೇತ್ರೆ, ಮಹ್ಮದ್​ ಜಾಬೇರ್​, ಶೇಕ್​ ಸಾಕೀಬ್​, ಮನೋಜ್​ ಖೇಲೆ, ಮಹಾದೇವ ಪಾಟೀಲ್​, ಯುವರಾಜ್​ ಬೆಂಡೆ, ದತ್ತು ಧುಲೆ, ಮಹ್ಮದ್​ ಮೊಹಾಸಿನ್​, ಸಿದ್ರಾಮಪ್ಪ, ಅಶೋಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net