ಶಿವಸೃಷ್ಠಿ ನಿಮಾರ್ಣ ಕಾರ್ಯ ಆರಂಭ

ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ  ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಶರಣು ಸಲಗರ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಇಒ ರಮೇಶ್​ ಸುಲ್ಫಿ, ಪೌರಾಯುಕ್ತ ರಾಜು ಬಣಕಾರ್​, ಬಿಇಒ ಸಿದ್ಧವಿರಯ್ಯ ರುದ್ನೂರ, ರಾಜು ಬಣಕಾರ, ದಿಲೀಪಕುಮಾರ ಉತ್ತಮ್​, ಸಿಪಿಐ

Published on
ಬಸವಕಲ್ಯಾಣ: ದೇಶದ ಎಲ್ಲ ಕಡೆಯ ಜನರು ಸಹ ಕಲ್ಯಾಣಕ್ಕೆ ಒಂದು ಸಲ ಬರಬೇಕು ಎನ್ನುವಂತೆ ಸಮಗ್ರ ಅಭಿವೃದ್ಧಿಯ ಕಲ್ಯಾಣ ನಿಮಾರ್ಣದ ಕನಸು ಇಟ್ಟುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ನೂತನ ಅನುಭವ ಮಂಟಪ ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ. ಶಿವಸೃಷ್ಠಿ ನಿಮಾರ್ಣ ಕಾರ್ಯ ಆರಂಭವಾಗಿದೆ ಶಾಸಕ ಶರಣು ಸಲಗರ ಭರವಸೆ ಹೇಳಿದರು
ನಗರದ ರಥ ಮೈದಾನದ ಬಿಕೆಬಿಡಿ ಸಭಾ ಭವನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿಗಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಕರ ಸಾಧನೆಯಿಂದ ವಿದ್ಯಾರ್ಥಿಗಳು ಸ್ಪೂತಿ ಪಡೆಯಬೇಕು. ದೊಡ್ಡ ಕನಸು ಕಾಣಬೇಕು. ಶ್ರಮ ವಹಿಸಿ ಸಾಧನೆ ಮಾಡಿ ಕಲ್ಯಾಣದ ಕೀರ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಪ್ರಕಾಶ ಕುದುರಿ ಮಾತನಾಡಿ, ಸರ್ಕಾರಗಳು ಜನರಿಗಾಗಿ ಅನೇಕ ಅಭಿವೃದ್ಧಿ ಯೋಜನೆ ಜಾರಿಗೊಳಿಸುತ್ತಿದ್ದು, ಅವುಗಳನ್ನು ಅನುಷ್ಠಾನಗೊಳಿಸುವುದು ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ. ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದ್ದು, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿದರು. ತಾಪಂ ಇಒ ರಮೇಶ್​ ಸುಲ್ಫಿ, ನಗರಸಭೆ ಪೌರಾಯುಕ್ತ ರಾಜು ಬಣಕಾರ್​, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವಿರಯ್ಯ ರುದ್ನೂರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿಲೀಪಕುಮಾರ ಉತ್ತಮ, ಸಿಪಿಐ ಅಲಿಸಾಬ್​ ಇದ್ದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿದರು. ನಾಲ್ಕು ಜನ ವಿದ್ಯಾರ್ಥಗಳು ಮಾಡಿದ ಭಾಷಣ ಗಮನ ಸೆಳೆಯಿತು.
ಗಮನ ಸೆಳೆದ ಅಧಿಕಾರಿಗಳ ಡ್ರೇಸ್​: ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರು ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಒಂದೇ ರೀತಿಯ ಡ್ರೇಸ್​ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net