ಪ್ರತಿ ಕ್ಷೇತ್ರದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಸಮಾನತೆಯ ಹೆಜ್ಜೆ

ಕಲಬುರಗಿ ಕೆಕೆಆರ್​ಟಿಸಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿ&ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಅರುಣಕುಮಾರ ಪಾಟೀಲ್​, ಡಾ.ಬಿ.ಸುಶೀಲಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​, ಆರ್​ಸಿ ಜಹೀರಾ ನಸೀಂ, ಜ್ಯೋತಿ ಅರುಣಕುಮಾರ ಪಾಟೀಲ್​ ಇತರರಿದ್ದರು.
ಕಲಬುರಗಿ ಕೆಕೆಆರ್​ಟಿಸಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿ&ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಅರುಣಕುಮಾರ ಪಾಟೀಲ್​, ಡಾ.ಬಿ.ಸುಶೀಲಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​, ಆರ್​ಸಿ ಜಹೀರಾ ನಸೀಂ, ಜ್ಯೋತಿ ಅರುಣಕುಮಾರ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ್​ ಅಭಿಮತ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ: ಆಡಳಿತ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳವಾಗುತ್ತಿರುವುದು ಸಮಾನತೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಅಭಿಪ್ರಾಯಪಟ್ಟರು.
ಕೆಕೆಆರ್​ಟಿಸಿ ಸಾರಿಗೆ ಸಂಸ್ಥೆ ಮತ್ತು ಸಂಸ್ಥೆಯ ಕಲಬುರಗಿ ವಿಭಾಗ&1ಮತ್ತು 2ರ ಸಹಯೋಗದಲ್ಲಿ ಕಲಬುರಗಿ ನಗರದ ಈಶಾನ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣದ ಪ್ರಗತಿ ಪ್ರಶಂಸಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಲಿಂಗಭೇದವಿಲ್ಲದ ಸಮಾನ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಂ ಮಾತನಾಡಿ, ಮಹಿಳೆಯರಿಗೆ ಕೇವಲ ಸಾಂಕೇತಿಕ ಗೌರವವಲ್ಲ, ವಾಸ್ತವಿಕ ಸಬಲೀಕರಣದ ಅಗತ್ಯವಿದೆ. ಕುಟುಂಬ ಮತ್ತು ವೃತ್ತಿ ಜೀವನವನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಯರು ಸಮಾಜದ ಬಲವಾದ ಆಧಾರಸ್ತಂಭರಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆಕೆಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಾ ಬಿ. ಮಾತನಾಡಿ, ಮಹಿಳಾ ಸಿಬ್ಬಂದಿಯ ಸಬಲೀಕರಣಕ್ಕೆ ಪುರುಷ ಸಿಬ್ಬಂದಿಯ ಸಹಕಾರ ಅತ್ಯವಶ್ಯಕ. ಕಾರ್ಯಸ್ಥಳದಲ್ಲಿ ಸಮಾನತೆ, ಸಹಾನುಭೂತಿ ಮತ್ತು ಪರಸ್ಪರ ಗೌರವದ ಸಂಸತಿ ಬೆಳೆಸುವ ಅಗತ್ಯತೆ ಪ್ರಸ್ತಾಪಿಸಿದರು.
ಅಧಿಕಾರಿ&ಸಿಬ್ಬಂದಿಗೆ ಪ್ರಶಂಸನಾ ಪತ್ರ
ನಿಗಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸುಮಾರು 40 ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗೌರವಿಸಿ, ಪ್ರಶಂಸನಾ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕಲಬುರಗಿ ವಿಭಾಗ&1ರ ಮಹಿಳಾ ತಾಂತ್ರಿಕ ಸಿಬ್ಬಂದಿಯಿಂದ ಸಾಂಸತಿಕ ನೃತ್ಯ ಹಾಗೂ ಶ್ರದ್ಧಾ ಅವರಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಜ್ಯೋತಿ ಅರುಣಕುಮಾರ ಪಾಟೀಲ ಸೇರಿದಂತೆ ನಿಗಮದ ವಿವಿಧ ಇಲಾಖಾ ಮುಖ್ಯಸ್ಥರು, ವಿಭಾಗೀಯ ನಿಯಂತ್ರಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಸ್ವಾಗತಿಸಿದರು. ಮುಖ್ಯ ಯಾಂತ್ರಿಕ ಅಭಿಯಂತರರು ಪ್ರಾಸ್ತಾವಿಕ ಮಾತನಾಡಿದರು. ಟಕ ವ್ಯವಸ್ಥಾಪಕಿ ಪ್ರೀತಿ ಕಾಳೆ ವಂದಿಸಿದರು. ಕೇಂದ್ರ ಕಚೇರಿಯ ಸಹಾಯಕ ಉಗ್ರಾಣಾಧಿಕಾರಿ ಸರಸ್ವತಿ ನಿರೂಪಿಸಿದರು.
"

ಮಹಿಳಾ ಸಿಬ್ಬಂದಿ ಸಮರ್ಪಿತ ಸೇವೆ ಪ್ರಶಂಸನೀಯ. ಇಂದು ಆಡಳಿತ, ಶಿಕ್ಷಣ, ಕ್ರೀಡೆ ಸೇರಿ ವಿವಿಧ ೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಚಳುವಳಿಗಳಿಗೆ ನಮಗೆಲ್ಲ ಪ್ರೇರಣೆಯಾಗಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net