ಸ್ತ್ರೀಯರು ಎಲ್ಲರಿಗೂ ಸ್ಫೂರ್ತಿ

ಬೀಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ ದಂಪತಿಯನ್ನು ಸನ್ಮಾನಿಸಲಾಯಿತು. ವಿಠ್ಠಲ ಹಿಂಡಲ್ಕರ, ಶಿವಾ ಬಾಗವಾಡಕರ, ದೀಪಾ ಪಾಟೀಲ, ಡಾ.ಮಂಜುಳಾ ಸವದತ್ತಿ ಇತರರಿದ್ದರು.
ಬೀಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ ದಂಪತಿಯನ್ನು ಸನ್ಮಾನಿಸಲಾಯಿತು. ವಿಠ್ಠಲ ಹಿಂಡಲ್ಕರ, ಶಿವಾ ಬಾಗವಾಡಕರ, ದೀಪಾ ಪಾಟೀಲ, ಡಾ.ಮಂಜುಳಾ ಸವದತ್ತಿ ಇತರರಿದ್ದರು.
Published on
ಇಟಗಿ: ಕುಟುಂಬ ನಿರ್ವಹಣೆ ಜತೆಗೆ ಸಾಮಾಜಿಕ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸುವ ಸ್ತ್ರೀಯರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಬೀಡಿ ಗ್ರಾಮದಲ್ಲಿ ಸಮರ್ಥ ಆದರ್ಶ ಗಾರ್ಮೆಂಟ್​ ಗುಂಪುಗಾರಿಕೆ ಅಭಿವೃದ್ಧಿ ಅಸೋಸಿಯೇಷನ್​ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರವೇ ತಾಲೂಕಾಧ್ಯ ವಿಠ್ಠಲ ಹಿಂಡಲ್ಕರ, ಮುಖ್ಯ ಆಯೋಜಕ ಶಿವಾ ಬಾಗವಾಡಕರ ಮಾತನಾಡಿದರು. ರುಕ್ಮಿಣಿ ವಿಠ್ಠಲ ಹಲಗೇಕರ ಅಧ್ಯತೆ ವಹಿಸಿದ್ದರು. ಸುನೀಲ ಮಡ್ಡಿಮನಿ, ದೀಪಾ ಪಾಟೀಲ, ಡಾ.ಮಂಜುಳಾ ಸವದತ್ತಿ, ಅಶ್ವಿನಿ ಬಾಗವಾಡಕರ, ಸ್ವಾತಿ ಕುರಿ, ವಿಠ್ಠಲ ಸಾಗರೇಕರ, ದಯಾನಂದ ಪಾಟೀಲ, ರಾಜೀವ ಪಿಜೊಳ್ಳಿ, ಅಮಿತ ಕುಂದೇಕರ, ಕಾಶೀಂ ಹಟ್ಟಿಹೊಳಿ, ಸುಭಾಷ ಗಂಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net