ಪಿಂಚಣಿ ಮೌಲೀಕರಣ ಕಾಯ್ದೆ ಹಿಂಪಡೆಯಿರಿ

ಪಿಂಚಣಿ ಮೌಲೀಕರಣ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಸುರಪುರ ತಹಸಿಲ್​ ಕಚೇರಿ ಎದುರು ಮಂಗಳವಾರ ಸರ್ಕಾರಿ ನಿವೃತ್ತ ನೌಕರರ ಸಂದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಮೂಲಕ ಮನವಿಪತ್ರ ಸಲ್ಲಿಸಲಾಯಿತು.
ಪಿಂಚಣಿ ಮೌಲೀಕರಣ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಸುರಪುರ ತಹಸಿಲ್​ ಕಚೇರಿ ಎದುರು ಮಂಗಳವಾರ ಸರ್ಕಾರಿ ನಿವೃತ್ತ ನೌಕರರ ಸಂದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಮೂಲಕ ಮನವಿಪತ್ರ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನಿವೃತ್ತ ನೌಕರರ ಸಂದಿಂದ ಪ್ರತಿಭಟನೆ
  • ಸುರಪುರದಲ್ಲಿ ತಹಸೀಲ್ದಾರ್​ಗೆ ಮನವಿ
ಸುರಪುರ: ನಿವೃತ್ತ ನೌಕರ ಮತ್ತು ಕುಟುಂಬ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025ರ ಮೌಲೀಕರಣ ಕಾಯ್ದೆ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂ ರಾಜ್ಯ ಟಕ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಇಲ್ಲಿನ ಸರ್ಕರಿ ನಿವೃತ್ತ ನೌಕರರ ಸಂದಿಂದ ಮಂಗಳವಾರ ತಹಸಿಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂದ ಪ್ರಮುಖರು ಮಾತನಾಡಿ, ನಿವೃತ್ತ ನೌಕರರನ್ನು ಮತ್ತು ಕುಟುಂಬ ಪಿಂಚಣಿದಾರರನ್ನು ವರ್ಗಿಕರಿಸಿ ಅವರ ನಡುವೆ ವ್ಯತ್ಯಾಸ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಾರ್ಚ್​ 25ರಂದು ಮೌಲೀಕರಣ ಕಾಯ್ದೆ 2025ನ್ನು ಅನುಷ್ಠಾನಕ್ಕೆ ತಂದಿದೆ. ಇದನ್ನು ಹಣಕಾಸು ಇಲಾಖೆಯ ಗಮನಕ್ಕೆ ತರದೆ ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಏಕಾ ಏಕಿಯಾಗಿ ಯಾವುದೇ ದೂರದೃಷ್ಠಿ ಇಲ್ಲದೆ ಜಾರಿಗೊಳಿಸಿರುವುದರಿಂದ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ ಎಂದು ಆರೋಪಿಸಿದರು.
ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಸಾಮಾಜಿಕ ನ್ಯಾಯ ಮತ್ತು ಕುಟುಂಬ ಭದ್ರತೆ ಒದಗಿಸುವಲ್ಲಿ ಈ ಕಾಯ್ದೆ ತೊಡಕಾಗಲಿದೆ. ಭಾರತದ ಸವೋರ್ಚ್ಛ ನ್ಯಾಯಾಲಯದ ತೀರ್ಪಿಗೂ ವಿರುದ್ಧವಾಗಿದೆ. ಸಂಧ್ಯಾವಂದನೆಯಲ್ಲಿರುವ ನಿವೃತ್ತರ ನೆಮ್ಮದಿಯ ಬದುಕು ಹಾಳು ಮಾಡಿದಂತಾಗಲಿದೆ. ಇದರಿಂದ ಪಿಂಚಣಿದಾರರು ವೇತನ ಆಯೋಗದ ಶಿಫಾರಸ್ಸುಗಳನ್ನು ಕಳೆದುಕೊಳ್ಳಲಿದ್ದು ಜತೆಗೆ ಬಾರಿ ನಷ್ಟಕ್ಕೆ ಒಳಗಾಗಲಿದ್ದಾರೆ ಎಂದು ದೂರಿದರು.
2025ರ ಮೌಲೀಕರಣ ನೂತನ ಕಾಯ್ದೆ ತಕ್ಷಣ ಹಿಂಪಡೆಯಬೇಕು. ಹಳೇ ಪಿಂಚಣಿ ಕಾಯ್ದೆ ಮುಂದುವರಿಸಬೇಕು. ನಿವೃತ್ತರಿಗೆ ಎಲ್ಲ ಆಯೋಗಗಳ ಶಿಫಾರಸ್ಸು ಪಡೆದುಕೊಳ್ಳುವಂತೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರಧಾನ ಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್​ ಮೂಲಕ ಸಲ್ಲಿಸಿದರು. ಸಂದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ, ಉಪಾಧ್ಯಕ್ಷ ರಾಜಾ ಅಮರಪ್ಪ ರಾಜ, ಸಂದ ಹನುಮಂತ ಪೂಜಾರಿ, ದೇವಿಂದ್ರ ಹಾದಿಮನಿ, ವಾಸುದೇವ ಗಂಗಿ, ದೇವಿಂದ್ರಪ್ಪ ಬಳಿಚಕ್ರ, ಭೀಮಣ್ಣ ಹುದ್ದಾರ, ನಾರಾಯಣರಾವ್​ ಜೂಜಾರಿ, ಸಿದ್ದಯ್ಯಸ್ವಾಮಿ, ಭೀಮರಾಯ ದರಬಾರಿ, ಶ್ರೀನಿವಾಸ ಪಾಣಿಭಾತೆ, ವಿಜಯ ವಿಭೂತೆ, ಗೂಳೆಪ್ಪ ಕುಂಬಾರ, ಅಮ್ಮಣ್ಣ ತಳವಾರ, ಹಣಮಂತ್ರಾಯ ಕಮತಗಿ, ಸೈಯದ್​ ಬಂದೇ ಅಲಿ, ದೇವಿಂದ್ರಪ್ಪ ಹಾದಿಮನಿ, ನಿಂಗಪ್ಪ ಹಾದಿಮನಿ, ಎಂ.ಎಸ್​.ಸಜ್ಜನ್​, ಭೀಮಣ್ಣ ಗುಡ್ಡಕಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net