ಸಾರಥ್ಯ ಸಂಟನೆ ಪದಾಧಿಕಾರಿ ಚಾಂದಿನಿ, ತ್ರಿಮೂರ್ತಿ, ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಪದಾಧಿಕಾರಿಗಳಾದ ಮಾಯಾ ನಾಯಕ, ಪ್ರಿಯಾಂಕ್, ಅಂಕಿತಾ, ಮಂಜುಳಾ, ಪುಂಡಲಿಕ್ ಸೇರಿ ಇತರರಿದ್ದರು. ನಂತರ ನೇತಾಜಿ ಸರ್ಕಲ್ನಲ್ಲಿ ಬೇಡಿಕೆಗಳಿಗೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದ ಇವರು, ಜಿಲ್ಲಾಧಿಕಾರಿ ಕಚೇರಿ ತೆರಳಿ ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. 150ಕ್ಕೂ ಹೆಚ್ಚು ಆಶಾಕಿರಣ ಸೇವಾ ಸಂಸ್ಥೆ ಕಾರ್ಯಕರ್ತರು ಭಾಗವಹಿಸಿದ್ದರು.