ಪತಿ ಕೊಲೆಗೈದ ಪತ್ನಿ, ಪ್ರಿಯಕರ ಬಂಧನ

ಬಂಧನ
ಬಂಧನ
Published on

ಅಥಣಿ ಗ್ರಾಮೀಣ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪತಿಯನ್ನು ಕೊಲೆಗೈದ ಪತ್ನಿ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದ ರೇಣುಕಾ ಚಂದ್ರಕಾಂತ ಶಿವಪೂಜಿ(31), ಈಕೆಯ ಪ್ರಿಯಕರ ಮಹಾಂತೇಶ ಧನಾಳೆ (32)ನನ್ನು ಅಥಣಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಖಿಳೇಗಾಂವ ಗ್ರಾಮದ ಚಂದ್ರಕಾಂತ ಶಿವಪೂಜಿ(43) ಕೊಲೆಗೀಡಾದವ. ಈತ ಕಾಮಾಲೆ ಔಷಧ ತರಲು ಹೋಗುತ್ತಿದ್ದಾಗ ಶಿರೂರ ಗ್ರಾಮದ ಬಳಿಯ ಗೋರ‌್ಯಾಳ ಹಳ್ಳದ ರಸ್ತೆ ತಿರುವಿನಲ್ಲಿ ಪತ್ನಿ ರೇಣುಕಾ ಹಾಗೂ ಈಕೆಯ ಪ್ರಿಯಕರ ಮಹಾಂತೇಶ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದರು.
ಪ್ರಕರಣ ಭೇದಿಸಿರುವ ಅಥಣಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಸಿಬ್ಬಂದಿ ಅಣ್ಣಾಸಾಬ ಈರಕರ, ಬಿ.ಆರ್.ಪಾಟೀಲ, ಎಂ.ಎಸ್.ಕೊಂಡಿ, ಜೆ.ಐ.ಪಟೇಗಾರ, ಜಿ.ಪಿ.ರಾಠೋಡ, ಎಸ್.ಬಿ.ಖೋತ, ಬಿ.ಎಂ.ತಳವಾರ, ಪಿ.ಆರ್.ಅರಳಿಮಟ್ಟಿ ತನಿಖೆ ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net