ಸೇಡಂ ಬಂದ್​ಗೆ ವ್ಯಾಪಕ ಜನಬೆಂಬಲ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವ್ಯಾಪಾರಸ್ಥರ ಸಂದಿಂದ ಸೇಡಂನ ಬಸವೇಶ್ವರ ವೃತದಲ್ಲಿ ರಸ್ತಾ ರೋಕೋ ನಡೆಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು. ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ವ್ಯಾಪಾರಸ್ಥರ ಸಂದ ಅಧ್ಯಕ್ಷ ರಾಜಶೇಖರ ನೀಲಂಗಿ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವ್ಯಾಪಾರಸ್ಥರ ಸಂದಿಂದ ಸೇಡಂನ ಬಸವೇಶ್ವರ ವೃತದಲ್ಲಿ ರಸ್ತಾ ರೋಕೋ ನಡೆಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು. ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ವ್ಯಾಪಾರಸ್ಥರ ಸಂದ ಅಧ್ಯಕ್ಷ ರಾಜಶೇಖರ ನೀಲಂಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಹಳಿ ಸ್ಥಳಾಂತರಿಸದ ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ ವಿರುದ್ಧ ಸಿಡಿದ ವರ್ತಕರು
  • ಹೆದ್ದಾರಿ ಸಂಚಾರಕ್ಕೆ ತಡೆ
ಸೇಡಂ: ನಗರದ ಹೃದಯ ಭಾಗದಲ್ಲಿರುವ ಅಲ್ಟ್ರಾಟೆಕ್​ ಸಿಮೆಂಟ್​ (ವಾಸವದತ್ತ) ಕಂಪನಿ ರೈಲ್ವೆ ಹಳಿ ಸ್ಥಳಾಂತರದ ಭರವಸೆ ನೀಡಿ ವರ್ಷಗಳಾದರೂ ಯಾವೊಂದು ಪ್ರಕ್ರಿಯೆ ಆರಂಭಿಸದಿರುವುದನ್ನು ಖಂಡಿಸಿ ವ್ಯಾಪಾರಸ್ಥರ ಸಂ ಮಂಗಳವಾರ ಕರೆ ನೀಡಿದ ಪಟ್ಟಣ ಬಂದ್​ಗೆ ವ್ಯಾಪಕ ಜನಬೆಂಬಲ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ನೂರಾರು ವರ್ತಕರು ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಜಮಾಯಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದರು. ಬಸವೇಶ್ವರ ವೃತಕ್ಕೆ ತೆರಳಿ ವಾಗ್ಧರಿ&ರೆಬ್ಬನಪಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಸುಮಾರು ಮೂರು ತಾಸು ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಪ್ರತಿಭಟಿಸಿದ ಸಂದರ್ಭದಲ್ಲಿ ಅಲ್ಟ್ರಾಟೆಕ್​ ಕಂಪನಿಯವರು ಒಂದೂವರೆ ವರ್ಷದೊಳದಗೆ ಹಳಿ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೀಗ ವರ್ಷ ಕಳೆದರೂ ಜಮೀನು ಖರೀದಿ ಕೆಲಸ ಆರಂಭಿಸಿಲ್ಲ. ಈ ಬಗ್ಗೆ ಕಿಂಚಿತ್ತೂ ಚಿಂತನೆ ಮಾಡದಿರುವಾಗ ಕೇವಲ ಆರು ತಿಂಗಳಲ್ಲಿ ಹಳಿ ಸ್ಥಳಾಂತರ ಅದ್ಹೇಗೆ ಸಾಧ್ಯವಾಗಲಿದೆ ಎಂದು ವ್ಯಾಪಾರಸ್ಥರ ಸಂದ ಅಧ್ಯಕ್ಷ ರಾಜಶೇಖರ ನೀಲಂಗಿ ಪ್ರಶ್ನಿಸಿದರು.
ಹಳಿ ಸ್ಥಳಾಂತರ ರ್ನಿಲಕ್ಷದಿಂದ ವ್ಯಾಪಕ ತೊಂದರೆಯಾಗುತ್ತಿದೆ. ಅಲ್ಲದೆ ನಗರದಲ್ಲಿ ಟ್ರಾಫಿಕ್​ ಸಮಸ್ಯೆ ತೀವ್ರವಾಗಿದ್ದು, ನಿಯಂತ್ರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯ ಕಾಲುದಾರಿ ಆಕ್ರಮಿಸಿರುವುದನ್ನು ನಗರಸಭೆ ತೆರವುಗೊಳಿಸಬೇಕು. ಮಾರುಕಟ್ಟೆಯ ಪ್ರಮುಖ ಸ್ಥಳಗಳಲ್ಲಿ ಶೌಚಗೃಹ ನಿರ್ಮಿಸಬೇಕು. ಸ್ಮಶಾನ ಭೂಮಿ ಅಭಿವೃದ್ಧಿಗೆ ಮುಂದಾಗಬೇಕು. ಜಿಲ್ಲಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಸ್​ ಓಡಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ ಹಿರೇಮಠ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಸಂದ ಉಪಾಧ್ಯಕ್ಷರಾದ ಅನಂತರೆಡ್ಡಿ ಪಾಟೀಲ್​, ಮನೋಹರ ದೊಂತಾ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಐನಾಪುರ, ಪದಾಧಿಕಾರಿಗಳಾದ ಶ್ರೀನಿವಾಸ ಕಾಸೋಜು, ಬಸವರಾಜ ರೇವಗೊಂಡ, ಶಿವಕುಮಾರ ಬೋಳಶೆಟ್ಟಿ, ಪ್ರಶಾಂತ ಮಹೇಂದ್ರಕರ್​, ಅಬ್ದುಲ್​ ಸತ್ತಾರ್​, ಸುನೀಲ ಮಾಣಿಕವಾರ, ಅನೀಲ ಮಾಲಪಾಣಿ, ನಿತಿನ್​ ಶಾಹ, ಆರಿಫ್​ ಖಾನ್​, ಶರಣಗೌಡ ರುದ್ನೂರ, ಪರಮೇಶ್ವರ ಸುಲೇಪೇಟಕರ್​, ರಾಜು ಹಡಪದ, ವರದಸ್ವಾಮಿ, ವೇಣುಗೋಪಾಲ ಮಂತ್ರಿ ಇತರರಿದ್ದರು.
ಸ್ಥಳಕ್ಕೆ ಬಾರದ ಕಾರ್ಖಾನೆ ಅಧಿಕಾರಿಗಳು
ರೈಲು ಹಳಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಮನವಿಪತ್ರ ಪಡೆಯಲು ಅಲ್ಟ್ರಾಟೆಕ್​ ಸಿಮೆಂಟ್​ ಕಾರ್ಖಾನೆ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರೂ ಯಾವೊಬ್ಬ ಅಧಿಕಾರಿಯನ್ನು ಪ್ರತಿಭಟನಾ ಸ್ಥಳಕ್ಕೆ ಕಳಿಸದೆ ಮೊಂಡುತನ ಪ್ರದರ್ಶಿಸಿತು. ಇದರಿಂದ ಕೆರಳಿದ ಪ್ರತಿಭಟನಾಕಾರರು ಕಾರ್ಖಾನೆಯವರು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಕಾಟಾಚಾರಕ್ಕೆ ಎಂಬಂತೆ ಸಿಬ್ಬಂದಿಯೊಬ್ಬರನ್ನು ಕಳುಹಿಸಲಾಯಿತು. ಕಾರ್ಖಾನೆ ಮುಖ್ಯಸ್ಥರು ಬರುವವರೆಗೆ ಮನವಿ ಕೊಡೋದಿಲ್ಲ ಎಂದು ಪಟ್ಟು ಹಿಡಿದ ಬಳಿಕ ಕಾರ್ಖಾನೆ ಅಧಿಕಾರಿ ಆಗಮಿಸಿ ಮನವಿಪತ್ರ ಸ್ವೀಕರಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net