ಜೆಜೆಎಂ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ

ಜಲಜೀವನ ಮಿಷನ್​ ಕಾಮಗಾರಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಚಿಮ್ಮನಚೋಡ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ತಯ್ಯಾಬ್​ ಪಟೇಲ್​, ತಾಹೇರ್​, ಬಂಡಾರೆಡ್ಡಿ, ಜಗನ್ನಾಥ ಚಲಕಪಳ್ಳಿ, ದಶರಥ ವಡ್ಡಪಳ್ಳಿ ಇತರರಿದ್ದರು.
ಜಲಜೀವನ ಮಿಷನ್​ ಕಾಮಗಾರಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಚಿಮ್ಮನಚೋಡ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ತಯ್ಯಾಬ್​ ಪಟೇಲ್​, ತಾಹೇರ್​, ಬಂಡಾರೆಡ್ಡಿ, ಜಗನ್ನಾಥ ಚಲಕಪಳ್ಳಿ, ದಶರಥ ವಡ್ಡಪಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಚಿಮ್ಮನಚೋಡ ಗ್ರಾಮಸ್ಥರು
  • ಶುದ್ಧ ನೀರು ಪೂರೈಸದಿದ್ದರೆ ಉಗ್ರ ಹೋರಾಟ
ಚಿಂಚೋಳಿ : ಚಿಮ್ಮನಚೋಡ ಗ್ರಾಮದಲ್ಲಿ ಜಲಜೀವನ ಮಿಷನ್​ ಅಡಿ ನಡೆದಿರುವ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಉಮೇಶ ರಾಠೋಡ್​ ಹಾಗೂ ಯುವರಾಜ ರಾಠೋಡ್​ ಅವರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಮಾಯಿಸಿದ ಗ್ರಾಮಸ್ಥರು ಯೋಜನೆ ಪ್ರಕಾರ ಗ್ರಾಮದಲ್ಲಿ 5 ಬೋರ್​ವೇಲ್​ ಮತ್ತು ಒಂದು ತೆರೆದ ಬಾವಿ ಕೊರೆಸಿ ಕುಡಿಯುವ ನೀರು ಪೂರೈಸಬೇಕಿತ್ತು. ಆದರೆ ಅಧಿಕಾರಿಗಳು ಒಂದೇ ಬಾವಿ ಕೊರೆಸಿದ್ದಾರೆ. ಅದೂ ಅಪೂರ್ಣವಾಗಿದ್ದರಿಂದ ಬಾವಿಯಲ್ಲಿ ಕಸ, ತ್ಯಾಜ್ಯ ಬಿದ್ದು ನೀರು ಕಲುಷಿತಗೊಂಡಿದೆ. ಕಾರಣ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕಿ ಉಳಿದ ಬೋರ್​ವೆಲ್​ಗಳನ್ನು ತಕ್ಷಣ ಕೊರೆಸಬೇಕು. ನೀರು ಸರಬರಾಜು ವ್ಯವಸ್ಥೆ ಸರಿಪಡಿಸಿ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸದಿದ್ದರೆ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಮುಖರಾದ ತಯ್ಯಾಬ್​ ಪಟೇಲ್​, ತಾಹೇರ್​, ಬಂಡಾರೆಡ್ಡಿ, ಜಗನ್ನಾಥ ಚಲಕಪಳ್ಳಿ, ದಶರಥ ವಡ್ಡಪಳ್ಳಿ, ಸಂತೋಷ ಮರುಳು, ತಾಜೋದ್ದಿನ್​, ಗೋಪಾಲ ಬಾಜೇಪಳ್ಳಿ, ಇಶಾಖ ಪಟೇಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net