ಶೌಚಗೃಹದ ಬೀಗ ತೆಗೆಸಿ: ಅಚ್ಚಲು ಪ್ರೌಢಶಾಲೆಯ ಅಡುಗೆಕೋಣೆ ಶಿಥಿಲಗೊಂಡಿದೆ, ಊಟದ ಹಾಲ್ ಇಲ್ಲ, ಮಳೆಯಾದರೆ ಆಟದ ಮೈದಾನದಲ್ಲಿ ನೀರು ನಿಲ್ಲುತ್ತದೆ, ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ, ಶೌಚಗೃಹವಿಲ್ಲದ ಪರಿಣಾಮ ಬಯಲಿಗೆ ಹೋಗಬೇಕಿದೆ ಎಂದು ಸಭೆಯಲ್ಲಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಆಗ ಗ್ರಾಪಂ ಅಧ್ಯಕ್ಷ ಅಂದಾನಿಗೌಡ ಮಾತನಾಡಿ, ಪ್ರೌಢಶಾಲೆಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಗೃಹವನ್ನು ಈಗಾಗಲೇ ನಿರ್ಮಿಸಿಕೊಡಲಾಗಿದೆ. ಆದರೂ ಏಕೆ ಬಳಕೆಯಾಗುತ್ತಿಲ್ಲ ? ಎಂದು ಪ್ರಶ್ನಿಸಿದಾಗ, ಶಿಕ್ಷಕರು ಶೌಚಗೃಹವನ್ನು ಬಳಸಿ, ಅದಕ್ಕೆ ಬೀಗ ಹಾಕಿದ್ದಾರೆ ಎಂಬ ದೂರು ಕೇಳಿ ಬಂದಾಗ ಕೂಡಲೇ ಶೌಚಗೃಹದ ಬೀಗ ತೆಗೆದು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಕರಿಗೆ ಅಧ್ಯಕ್ಷರು ಸೂಚಿಸಿದರು.