ರೇಷ್ಮೆ ನಗರ ಡೆಸ್ಕ್
ರೇಷ್ಮೆನಗರ ಖ್ಯಾತಿಯ ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯು ಕೃಷಿ, ಹೈನುಗಾರಿಕೆ, ಶಿಕ್ಷಣ, ಕಲೆ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದು, ರಾಜಕೀಯ ಶಕ್ತಿ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಮಾಗಡಿ ಕೆಂಪೇಗೌಡರ ಕೋಟೆ, ವೀರಸಮಾದಿ, ಭೈರವದುರ್ಗ, ಕೆಂಪಾಪುರ ಕೆರೆಯಂತಹ ಐತಿಹಾಸಿಕ ಸ್ಥಳಗಳು, ರಣಹದ್ದುಗಳ ಸಂರಕ್ಷಿತಾರಣ್ಯ, ರಾಮದೇವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟದಂತ ಪ್ರಾಕೃತಿಕ ರಮ್ಯತಾಣಗಳು, ಕಾವೇರಿ, ವೃಷಭಾವತಿ, ಅರ್ಕಾವತಿ ನದಿಗಳು ಇಲ್ಲಿ ಹರಿಯುವುದರಿಂದ ಸಮೃದ್ಧ ವನ್ಯ ಸಂಪತ್ತು ಜಿಲ್ಲೆಯಲ್ಲಿದೆ. ಚನ್ನಪಟ್ಟಣ ಬೊಂಬೆಗಳಂತೂ ಜಗತ್ಪ್ರಸಿದ್ಧ. ಇಂತಹ ಜಿಲ್ಲೆಯ ಜನರ ಧ್ವನಿಯಾಗಿ ವಿಜಯವಾಣಿಯ ರೇಷ್ಮೆ ನಗರ ಆವೃತ್ತಿ ಪ್ರಕಟಗೊಳ್ಳುತ್ತಿದ್ದು, ಡಿಜಿಟಲ್ ವೇದಿಕೆ ಮೂಲಕವೂ ಓದುಗರಿಗೆ ಕ್ಷಣಕ್ಷಣದ ಮಾಹಿತಿ ಒದಗಿಸುತ್ತಿದೆ.