ಭಾರತದ ದೋಸೆ ರಾಜಧಾನಿ ಯಾವುದು ಗೊತ್ತಾ?; ಕರ್ನಾಟಕದ ಈ ನಗರವೇ ದೋಸೆ ಪ್ರಿಯರ ಸ್ವರ್ಗ...Dosa Capital

Dosa Capital of India
Dosa Capital of India
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ದೇಶದ ದೋಸೆ ರಾಜಧಾನಿ
  • ಮಸಾಲೆ ದೋಸೆ, ಸೆಟ್​, ತುಪ್ಪ, ಬೆಣ್ಣೆ ದೋಸೆಗೆ ಬೆಂಗಳೂರು ಭಾರಿ ಫೇಮಸ್
  • ವಿದೇಶಿಗರು, ದೇಶದ ಹಲವು ರಾಜ್ಯದವರು ನೆಚ್ಚಿಕೊಳ್ಳುವ ದೋಸೆ ಇಲ್ಲಿದೆ
Dosa Capital of India: ಬೆಣ್ಣೆ ದೋಸೆ, ತುಪ್ಪದ ದೋಸೆ, ಸೆಟ್ ದೋಸೆ, ಪ್ಲೇನ್, ಮಸಾಲ ಹೀಗೆ ನಾನಾ ರೀತಿಯಲ್ಲಿ ದೋಸೆಗಳು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ವಿದೇಶಿಗರು ಇಲ್ಲಿನ ದಕ್ಷಿಣ ಭಾರತಕ್ಕೆ ಭೇಟಿ ಕೊಟ್ಟಾಗ ಈ ನಗರದಲ್ಲಿ ದೋಸೆ ಸವಿದು ತೆರಳುತ್ತಾರೆ. ಎಲ್ಲರಿಗೂ ಇದೇ ಅಚ್ಚುಮೆಚ್ಚು. ದೇಶದ ಹಲವು ರಾಜ್ಯಕ್ಕೆ ರಾಜಧಾನಿ ಇರುವಂತೆ ಆಯಾ ರಾಜ್ಯದ ಜಿಲ್ಲೆಗಳಿಗೆ ಅದರದ್ದೇ ಆದ ಒಂದು ಫುಡ್​ ಕಲ್ಚರ್​ ಇರುತ್ತದೆ. ಮತ್ತು ಆ ಒಂದು ತಿಂಡಿಯೇ ಅಲ್ಲಿ ಫೇಮಸ್ ಆಗಿರುತ್ತದೆ.
ಅದರಂತೆ ದೋಸೆಗಳ ರಾಜಧಾನಿ ಯಾವುದು ಎನ್ನುವ ಚರ್ಚೆಗೆ ಹೀಗೋಂದು ಉತ್ತರ ಸಿಕ್ಕಿದೆ. ಅದೇ ಬೆಂಗಳೂರು ಎಂದು. ಹೌದು ಕರ್ನಾಟಕದ ರಾಜಧಾನಿಯಾಗಿರುವ ಐಟಿ-ಬಿಟಿ ಸಿಟಿ, ಮೆಟ್ರೋ ನಗರಿ ಬೆಂಗಳೂರೇ ದೋಸೆಗಳ ರಾಜಧಾನಿ. ಇಲ್ಲಿ ಸಿಗುವ ದೋಸೆಯನ್ನು ನೆಚ್ಚಿಕೊಳ್ಳದೇ ಇರುವವರು ಇಲ್ಲವೇ ಇಲ್ಲ.

ಬೆಂಗಳೂರಿನಲ್ಲಿ ಸಿಗತ್ತೆ ಇಷ್ಟು ವಿಧವಾದ ದೋಸೆ

ಮಸಾಲೆ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ರವಾ ದೋಸೆ, ಈರುಳ್ಳಿ ದೋಸೆ, ಚೀಸ್ ದೋಸೆ, ಪೊಡಿ ದೋಸೆ, ಪ್ಲೇನ್​ ದೋಸೆ, ತುಪ್ಪದ ರೋಸ್ಟ್ ದೋಸೆ ಇತ್ತೀಚೆಗೆ ಮಂಗಳೂರಿನಿಂದಾಗಿ ಇಲ್ಲಿ ನೀರ್​ ದೋಸೆ ಸಿಗುತ್ತಿದೆ. ಇದಕ್ಕೆಲ್ಲ ಆಲೂಗಡ್ಡೆ ಪಲ್ಯ ಇದ್ದರೆ ಆಹಾ ಸ್ವರ್ಗವೇ ಇಳಿದಂತೆ ಭಾಸವಾಗುತ್ತದೆ.

ಬೆಂಗಳೂರಿನ ದೋಸೆ ಫೇಮಸ್ ಯಾಕೆ?

ಬೆಂಗಳೂರಿನಲ್ಲಿ ದೋಸೆ ಒಂದು ಆಹಾರ ಪದಾರ್ಥವಲ್ಲ ಇದು ಇಲ್ಲಿನ ಜನರ ಒಂದು ಭಾವನಾತ್ಮಕ ಆಹಾರ. ಇಲ್ಲಿ ಮಾಡುವ ದೋಸೆಗಳು ಇಲ್ಲಿನ ಟಿಫಿನ್​ ಸೆಂಟರ್​ ಮತ್ತು ಹೋಟೆಲ್​​ಗಳಿಂದ ಹೆಚ್ಚು ಪ್ರೇರಿತವಾಗಿ, ಜಗತ್ತಿನ ನಾನಾ ಮೂಲೆಯಲ್ಲಿರುವ ಜನರು ಇಲ್ಲಿಗೆ ಆಗಮಿಸಿ, ದೋಸೆಯನ್ನೇ ಖರೀದಿ ಮಾಡಿ ತಿನ್ನುತ್ತಾರೆ.

ಬೆಂಗಳೂರಿನ ದೋಸೆ ವಿಶಿಷ್ಟ ಏಕೆ?

ಬೆಣ್ಣೆ ಮತ್ತು ತುಪ್ಪದ ಬಳಕೆ, ಸಂಪೂರ್ಣ ಹುದಗಿಸಿಟ್ಟ ಹಿಟ್ಟು, ಗರಿ ಗರಿಯಾಗಿ ತಿನ್ನಲು ಇಷ್ಟವಾಗುವ ರೀತಿ ಅದಕ್ಕೊಂದುವಂತೆ ಮಾಡುವ ಚಟ್ನಿ ಮತ್ತು ಆಲೂಗಡ್ಡೆ ಪಲ್ಯವು ಆಹಾರ ಪ್ರಿಯರನ್ನು ಇನ್ನಷ್ಟು ತಿನ್ನುವಂತೆ ಪ್ರೇರೇಪಣೆ ನೀಡುತ್ತದೆ.
ಮೈಸೂರು, ಉಡುಪಿ, ಮಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಸಾಮಾನ್ಯವಾಗಿ ದೋಸೆ ಮಾಡುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸಿಗುವಂತಹ ದೋಸೆಯಷ್ಟು ಗರಿಗರಿಯಾಗಿ, ಮೃದುತ್ವ ಇರೋದಿಲ್ಲ. ಇಷ್ಟೇ ಅಲ್ಲದೆ ಇದು ಬ್ಯಾಚುಲರ್ಸ್​ಗಳಿಗೆ ಹೇಳಿ ಮಾಡಿಸಿದ ಆಹಾರ. ಇದನೊಮ್ಮೆ ರುಬ್ಬಿ ಫ್ರಿಡ್ಜ್​ನಲ್ಲಿ ಇಟ್ಟರೆ ಸಾಕು ಯಾವ ದಿನ ಬೇಕಾದರು ರೆಡಿಯಾಗಿ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಬಹುದಾಗಿ. ಇತ್ತೀಚೆಗೆ ಯಾವುದೇ ಸಂಚಾರಿ ಕ್ಯಾಂಟಿನ್​ ಕಂಡರೂ ಅಲ್ಲಿ ದೋಸೆ ಇರುವುದು ಮ್ಯಾಂಡೇಟರಿಯಾಗಿ ಬಿಟ್ಟಿದೆ. ತುಪ್ಪ ಭರಿತ ದೋಸೆಯ ಸ್ವಾದ ಹಸಿದ ಹೊಟ್ಟೆಗೆ ಉತ್ತಮ ಪ್ರತಿಕ್ರೆಯೆ ನೀಡುತ್ತದೆ. ಹೀಗಾಗಿ ಬೆಂಗಳೂರನ್ನು ದೋಸೆಯ ರಾಜಧಾನಿಯೆಂದೇ ಕರೆಯಲಾಗುತ್ತದೆ.

ಎಲ್ಲೆಲ್ಲಿ ದೋಸೆ ತಿನ್ನಲು ಚಂದ

ದೋಸೆ ತಿನ್ನಲು ಬೆಂಗಳೂರಿನಲ್ಲಿ ಸೂಕ್ತ ಜಾಗವೆಂದರೆ ಅದು ವಿದ್ಯಾರ್ಥಿ ಭವನ ಇಲ್ಲಿ ವಿರಾಟ್​ ಕೊಹ್ಲಿ, ವೆಂಕಟೇಶ್​​ ಸೇರಿ ಹಲವರು ಗಣ್ಯರು ಸವಿದಿದ್ದರು. ಇನ್ನು ಮಲ್ಲೇಶ್ವರಂನ ಸಿಟಿಆರ್​, ರಾಘವೇಂದ್ರ ಬೆಣ್ಣೆ ದೋಸೆ ಶ್ರೀಗುರು ಕೊಟ್ಟೇಶ್ವರ ಬೆಣ್ಣೆ ದೋಸೆ ಈಸ್ಥಳಕ್ಕೆ ಭೇಟಿ ಕೊಡಬಹುದು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net