ಅಂದು ಐಶ್ವರ್ಯಾ ರೈ, ಇಂದು ತ್ರಿಶಾ; ದಕ್ಷಿಣ ಭಾರತದಲ್ಲೆಲ್ಲ ತಿಳಿ ನೀಲಿ ಸೀರೆ ಬಗ್ಗೆಯೇ ಚರ್ಚೆ, ಏಕೆ?..Trisha Saree

Trisha Krishnan blue saree
Trisha Krishnan blue saree
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್​ ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದರು ಮುಗಿದಿಲ್ಲ ತಿಳಿ ನೀಲಿ ಸೀರೆ ಬಗ್ಗೆ ಚರ್ಚೆ
  • ಆಕಾಶ ನೀಲಿ ಬಣ್ಣದ ಸಣ್ಣ ಬಾರ್ಡರ್ ಸೀರೆ, ಕೆನೆ ಬಣ್ಣದ ಡಿಸೈನರ್ ಬ್ಲೌಸ್ ಬಗ್ಗೆ ಮಾತು
  • 2000 ಇಸವಿಯಲ್ಲಿ ಐಶ್ವರ್ಯಾ ರೈ ಅವರು ಸಹ ಇಂತದ್ದೇ ಬಣ್ಣದ ಸೀರೆ ಧರಿಸಿದ್ದರು ಎಂದು ಮಾತು
ಸಾಕಷ್ಟು ಹಾರ್ಡ್​​ವರ್ಕ್​ ಜೊತೆಗೆ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿದ್ದ ನಟ ವಿಜಯ್​ ಅವರು, ಎರಡು ವರ್ಷದ ಹಿಂದೆ ತಮಿಳಿಗ ವೆಟ್ರಿ ಕಳಗಂ ಪಕ್ಷ ಕಟ್ಟಿ, ಮೊದಲ ಬಾರಿ ಚುನಾವಣೆಯನ್ನು ಎದುರಿಸಿ ಭರ್ಜರಿ ಸಕ್ಸಸ್​ ಕಂಡಿದ್ದಾರೆ. ಮೇ.10ರಂದು ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾತ್ರ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ, ಕಾರ್ಯಕ್ರಮಕ್ಕೆ ತ್ರಿಷಾ ಎಂಟ್ರಿ ಕೊಟ್ಟ ರೀತಿಯೂ ಸೋಶಿಯಲ್​ ಮೀಡಿಯಾದಲ್ಲಿ ನಾನಾ ವಿಧದಲ್ಲಿ ಚರ್ಚೆಗೆ ಮುನ್ನುಡಿ ಬರೆಯುತ್ತಿದೆ. ಅವರ ಡ್ರೆಸ್ಸಿಂಗ್ ಸೆನ್ಸ್, ನೆಕ್ಲೇಸ್, ಜಡೆ, ಸೀರೆ, ಅತ್ತಿದ್ದು, ನಕ್ಕಿದ್ದು ಎಲ್ಲವೂ ಮಾತಿಗಿಳಿಯುವಂತೆ ಮಾಡಿದೆ.
ತ್ರಿಶಾ ಅವರು ಭಾನುವಾರ ಸ್ಟೇಡಿಯಂಗೆ ಎಂಟ್ರಿ ಕೊಡುತ್ತಲೇ ವಿಜಯ್​ ಅವರ ತಾಯಿಯನ್ನು ಆಲಂಗಿಸಿಕೊಂಡು ಗೌರವ ಕೊಟ್ಟರು. ತಮ್ಮ ಅಭಿಮಾನಿಗಳತ್ತ ಕೈ ಬೀಸಿದರು. ಆಗ ತ್ರಿಶಾ ಮುಖದಲ್ಲಿ ಹೊಳಪು, ಸಂಭ್ರಮ ಎದ್ದು ಕಾಣುತ್ತಿತ್ತು. ಆಕಾಶ ನೀಲಿ ಬಣ್ಣದ ಸಣ್ಣ ಬಾರ್ಡರ್ ಸೀರೆ, ಕೆನೆ ಬಣ್ಣದ ಡಿಸೈನರ್ ಬ್ಲೌಸ್, ಕೆಂಪು ಪೆಂಡೆಂಟ್​​ನ ಡೈಮಂಡ್ ನೆಕ್ಲೆಸ್. ಕೂದಲನ್ನು ಬನ್ ಮಾಡಿ ಅದಕ್ಕೆರಡು ಸುತ್ತು ಮಲ್ಲಿಗೆ ಹೂ. ಅವರು ಯಾರದ್ದೋ ಮದುವೆಗೆ ಬಂದಂತೆ ಕಾಣಿತ್ತಿತ್ತು. ಈ ಮಧ್ಯೆ ವೈರಲ್ ಆಗ್ತಿರೋದು ಮತ್ತೊಂದು ವಿಚಾರ ಅದೇನೆಂದರೆ, ತ್ರಿಶಾ ಅವರು ಧರಿಸಿದ್ದ ಇಂತದ್ದೇ ಸ್ಯಾರಿಯನ್ನು ನಟಿ ಐಶ್ವರ್ಯಾ ರೈ ಅವರು ಅಟಲ್​ ಬಿಹಾರಿ ವಾಜಪೇಯಿಯನ್ನು ಕಾಣಲು ಧರಿಸಿದ್ದರು. ಅದರದ್ದೇ ಕಾಪಿ ಇದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ನಂದಿನಿ ಮತ್ತು ಕುಂಡವೈ ಎಂದು ಬಣ್ಣನೆ

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರ ಮೂಲಕ ಇಬ್ಬರು ನಾಯಕಿಯರ ನಡುವೆ ವಿಶೇಷ ಸಂಬಂಧವನ್ನು ಬೆಳೆಸಲು ನೆಟ್ಟಿಗರು ಶುರು ಮಾಡಿಕೊಂಡಿದ್ದಾರೆ. ಇಬ್ಬರ ಫೋಟೋ ಹಂಚಿಕೊಂಡು "ನಂದಿನಿ ಮತ್ತು ಕುಂಡವೈ" ಎಂದು ಶೀರ್ಷಿಕೆ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ನಂದಿನಿ ಪಾತ್ರ ನಿರ್ವಹಿಸಿದ್ದರೆ, ತ್ರಿಷಾ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಕುಂಡವೈ ಪಾತ್ರವನ್ನು ನಿರ್ವಹಿಸಿದ್ದರು.


ನಟಿ ಐಶ್ವರ್ಯಾ ರೈ ಅವರು 2000 ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿದ್ದಾಗ ಧರಿಸಿದ್ದ ಸೀರೆ ಮತ್ತು ತ್ರಿಶಾ ಅವರು ಇತ್ತೀಚೆಗೆ ಧರಿಸಿದ್ದ ಸೀರೆ ಒಂದೇ ರೀತಿಯದ್ದು ಎಂದು ತುಲನೆ ಮಾಡಲಾಗುತ್ತಿದೆ. ಐಶ್ವರ್ಯಾ ರೈ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಅವರು ಸಹ ಅಕಾಶ ನೀಲಿ ಸೀರೆ ಧರಿಸಿ, ಅದಕ್ಕೆ ಹೊಂದುವ ರೇಷ್ಮೇ ನೂಲಿನ ಬ್ಲೌಸ್ ಧರಿಸಿದ್ದಾರೆ. ಅದಕ್ಕೆ ಚಿನ್ನದ ಆಭರಣ, ಹೇರ್​ಗೆ ಬನ್​ ಹಾಕಿ, ಪಿಂಕ್​ ಲಿಪ್​ಸ್ಟಿಕ್​ ಹಾಕಿಕೊಂಡು ದೇವತೆಯಂತೆ ಕಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net