ಅಸೆಂಬ್ಲಿಯಲ್ಲಿ ಹಳೆಯ ಗೆಳೆಯರ ಜುಗಲ್‌ಬಂದಿ: ಸಿಎಂ ವಿಜಯ್‌, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಳೆ ಫೋಟೋ ವೈರಲ್..Vijay

Vijay-Udhayanidhi Stalin
Vijay-Udhayanidhi Stalin
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಮತ್ತು ಉದಯನಿಧಿ ಸ್ಟಾಲಿನ್ ಅವರ ಹಳೆಯ ವೈರಲ್
  • ಉದಯನಿಧಿ ಸ್ಟಾಲಿನ್ ಈಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ
  • ವಿಜಯ್ ಅಭಿನಯದ 'ಕುರುವಿ' ಚಿತ್ರದ ಸಮಯದ ಫೋಟೋ ವೈರಲ್
ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿ, ಜನರ ಕಣ್ಮಣಿಯಾಗಿದ್ದ ವಿಜಯ್​ ಅವರು ಈಗ ಸಿಎಂ ಆಗಿ ಜನರಿಗೆ ಕಮಾಲ್​ ನೀಡಲಿದ್ದಾರೆ. ಇನ್ನು ವಿಶೇಷವೆಂದರೆ ಅವರ ಚಲನ ಚಿತ್ರದ ಗೆಳೆಯ ಉದಯನಿಧಿ ಸ್ಟಾಲಿನ್ ವಿಪಕ್ಷ ನಾಯಕನಾಗಿದ್ದು, ಪರಸ್ಪರ ಎದುರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಹಳೆಯ ಭಾವಚಿತ್ರವೊಂದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿಜಯ್​​ ಸಿಎಂ ಆಗಿ ಪ್ರಮಾಣ ಸ್ವೀಕರಿಸಿರುವ ಹಿನ್ನೆಲೆ, ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ಮಾಜಿ ಸಿಎಂ ಸ್ಟಾಲಿನ್​ ನಿವಾಸಕ್ಕೆ ತೆರಳಿ ಶಾಲು ಹೊದಿಸಿ, ಹೂ ಗುಚ್ಛಕೊಟ್ಟು ಆಶೀರ್ವಾದಿಸಿದ್ದರು. ಉದಯನಿಧಿ ಸ್ಟಾಲಿನ್​ ಕೂಡ ಉಪಸ್ಥಿತಿರಿದ್ದರು. ಈ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇಬ್ಬರ ಫೋಟೋ ವೈರಲ್ ಆಗಿದೆ.
ಈಗಾಗಲೇ ವಿಜಯ್​ ಅವರು ಜನನಾಯಗನ್​ ಕೊನೆಯ ಸಿನಿಮಾ ಎಂದು ಘೋಷಿಸಿದ್ದರು. ಉದಯನಿಧಿಸ್ಟಾಲಿನ್​ ಅವರು ಸಹ ಕೊನೆಯದಾಗಿ ನಟಿಸಿದ್ದ ಸಿನಿಮಾ ಎಂದರೆ ಅದು ಮಾಮಣ್ಣನ್ ಇದಕ್ಕೂ ಮುಂಚೆ ಓಕೆ ಓಕೆ, ಕಲಗ ತಲೈವನ್ ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದರು. ಜೊತೆಗೆ, ಅವರು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು.

'ಕುರುವಿ' ದೋಸ್ತ್

2008ರಲ್ಲಿ ತೆರೆಕಂಡ 'ಕುರುವಿ' ಚಿತ್ರವನ್ನು ಉದಯನಿಧಿ ನಿರ್ಮಿಸಿದ್ದರು. ತ್ರಿಷಾ ಸಹನಟಿಯಾಗಿ ನಟಿಸಿದ್ದರು. ಈ ಸಿನಿಮಾ ಬ್ಲಾಕ್​ ಬ್ಲಷ್ಟರ್​ ಹಿಟ್ ಕಂಡಿತ್ತು. ಈಗ ವೈರಲ್ ಆಗಿರುವ ಫೋಟೋ ಆ ಕಾಲದ್ದಾಗಿದ್ದು, ಇಬ್ಬರೂ ಯುವ ನಟರು ಆತ್ಮೀಯವಾಗಿರುವುದನ್ನು ಕಾಣಬಹುದು. ಅಂದು ನಿರ್ಮಾಪಕ-ನಟನಾಗಿದ್ದ ಈ ಜೋಡಿ ಇಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರಾಗಿ ಅಸೆಂಬ್ಲಿಯಲ್ಲಿ ಮುಖಾಮುಖಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ನಡೆದ ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಸಂಭವಿಸಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಭರ್ಜರಿ ಜಯ ಸಾಧಿಸುವ ಮೂಲಕ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದೆ. ಮೇ 10 ರಂದು ನಡೆದ ಅದ್ಧೂರಿ ಪ್ರಮಾಣ ವಚನ ಸಮಾರಂಭದಲ್ಲಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮತ್ತೊಂದೆಡೆ, ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಜನನಾಯಗನ್​ ರಿಲೀಸ್ ಎಂದು?

ವಿಜಯ್ ಅವರ ರಾಜಕೀಯ ಜೀವನದ ಪೂರ್ಣಾವಧಿ ಕಾರ್ಯದ ಹಿನ್ನೆಲೆಯಲ್ಲಿ ಅವರು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಅವರ ಅಂತಿಮ ಚಿತ್ರ ಎಂದು ಕರೆಯಲಾಗುತ್ತಿರುವ 'ಜನ ನಾಯಗನ್​' ಹಲವು ಕಾರಣಗಳಿಂದ ಬಿಡುಗಡೆಗೊಂಡಿಲ್ಲ. ಈ ಚಿತ್ರವು 2026ರ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಮಮಿತಾ ಬೈಜು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾ ರಿಲೀಸ್​ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net