ದಾನಮ್ಮ ದೇವಿಯ ವಿವಾಹ ಮಹೋತ್ಸವ

,
,
Published on

ಪ್ರಮುಖ ಮುಖ್ಯಾಂಶಗಳು

  • ಪೇಠಶಿರೂರಿನಲ್ಲಿ ಪುರಾಣ ಕಾರ್ಯಕ್ರಮ
  • ಸಾಕ್ಷಿಯಾದ ಅಸಂಖ್ಯಾತ ಭಕ್ತರು
ಶಹಾಬಾದ್​: ಪೇಠಶಿರೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶಿವಶರಣೆ ಗುಡ್ಡಾಪುರ ದಾನಮ್ಮ ದೇವಿ ಪ್ರವಚನದಲ್ಲಿ ದೇವಿಯ ವಿವಾಹ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.
ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳ 17ನೇ ಪಟ್ಟಾಧಿಕಾರಿ ಮಹೋತ್ಸವ, ಶ್ರೀ ಶಿವ ಪಂಚಾಕ್ಷರೇಶ್ವರ ಸ್ವಾಮಿಗಳ 47ನೇ ಪುಣ್ಯಸ್ಮರಣೆ ನಿಮಿತ್ತ ನಡೆಯುತ್ತಿರುವ ಪುರಾಣದಲ್ಲಿ ಪುರಾಣಿಕ ಸಂಗಮೇಶ ಶಾಸಿಗಳು ಶಿವಶರಣೆ ದಾನಮ್ಮ ದೇವಿ, ಪರಶಿವನ ಆವತಾರಿ ಸೋಮನಾಥ ಅವರ ವಿವಾಹ ಸನ್ನಿವೇಶ ವಿವರಿಸಿದರು. ಬಳಿಕ ಗ್ರಾಮಸ್ಥರು ಪ್ರತ್ಯಕ್ಷವಾಗಿ ವಿವಾಹ ಮಹೋತ್ಸವ ನಡೆಸಿದರು. ಶ್ರೀಮಠದ ಭಕ್ತರಾದ ಪುಂಡಲೀಕ ರಜಪೂತ& ಸೋನಾಬಾಯಿ ರಜಪೂತ ದಂಪತಿ ವರನ ಕಡೆಯವರಾಗಿ ಹಾಗೂ ರೇವಣಸಿದ್ದಪ್ಪ ಬೆಲ್ಲದ& ಲ್ಮಬಾಯಿ ಬೆಲ್ಲದ ದಂಪತಿ ವಧುವಿನ ಕಡೆಯವರಾಗಿ ಕನ್ಯಾದಾನ ಸೇರಿ ಇನ್ನಿತರ ಕಾರ್ಯ ನಡೆಸಿಕೊಟ್ಟರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ, ತೊನಸನಳ್ಳಿ(ಎಸ್​)ಯ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮೃತ್ಯುಂಜಯಸ್ವಾಮಿ ಹಿರೇಮಠ, ಸಂಗಮೇಶ್ವರ ಕಲಶೆಟ್ಟಿ, ಸಂಗಣ್ಣ ಕುಂಬಾರ, ಅಂಬರೀಷ ನೆಲೋಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net