

ಪ್ರಮುಖ ಮುಖ್ಯಾಂಶಗಳು
ಕಾರ್ಯಕ್ರಮದ ವೇದಿಕೆಯಲ್ಲಿ ಯಾರನ್ನು ಕೂರಿಸಬೇಕು ಎನ್ನುವ ನಿರ್ಧಾರ ಆಯೋಜಕರದ್ದಾಗಿರುತ್ತದೆ. ನಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂದು ಬಿಜೆಪಿಗರು ಕೇಳುವುದು ಹಾಸ್ಯಾಸ್ಪದ. ಅಧಿಕಾರದಲ್ಲಿ ಇಲ್ಲದಿರುವಾಗಲೇ ಇಷ್ಟೆಲ್ಲ ಗೂಂಡಾವರ್ತನೆ ತೋರುತ್ತಿರುವ ಇವರು ಅಧಿಕಾರದಲ್ಲಿದ್ದರೆ ಹೇಗೆ ವರ್ತಿಸುತ್ತಾರೆ ಎಂಬುದು ಜನರಿಗೆ ತಿಳಿದಿದೆ.
— > ಡಾ.ಶರಣಪ್ರಕಾಶ ಪಾಟೀಲ್, ಸಚಿವ
ನೂರಾರು ಜನರೊಂದಿಗೆ ಗ್ರಾಮಕ್ಕೆ ಬಂದ ಬಿಜೆಪಿಗರು ಇಲ್ಲಿನ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ರಾಜಕೀಯಕ್ಕಾಗಿ ದೇವಸ್ಥಾನದ ದೇಣಿಗೆಯಿಂದ 10 ಕೋಟಿ ರೂ. ಲೂಟಿ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಎಲ್ಲದಕ್ಕೂ ಸ್ಪಷ್ಟನೆ ಕೊಡಲು ನಾನು ಸಿದ್ಧನಿದ್ದೇನೆ.
— > ಸತೀಶರೆಡ್ಡಿ ಪಾಟೀಲ್ ರಂಜೋಳ, ಅಧ್ಯಕ್ಷ, ಕಾರ್ಮಿಕರ ಸಂಘ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ