ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದ್ದು, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬೆಳೆ ಮಾತ್ರವಲ್ಲದೆ ಜಾನುವಾರುಗಳಿಗೂ ಕುಡಿಯಲು ನೀರಿಲ್ಲ. ಹೀಗಿರುವ ಎನ್ಎಸ್ಎಲ್ ಕಾರ್ಖಾನೆ ಕಬ್ಬು ನೀಡಿದ ರೈತರಿಗೆ ಈವರೆಗೂ ಹಣ ನೀಡಿಲ್ಲ. ಇತ್ತ ಕೃಷಿ ಮಾಡಬೇಕೆಂದರೆ ನೀರಿಲ್ಲ, ಜಾನುವಾರುಗಳಿಗೆ ಮೇವು ಖರೀದಿಸಲು ಹಣವಿಲ್ಲ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅಮರ್ಜಾ ಡ್ಯಾಮ್ನ ಝೀರೋ ಕಿಮೀ. ಇಂದ 30 ಕಿಮೀ. ವರೆಗಿನ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಕೂಡಲೇ ಸ್ವಚ್ಛಗೊಳಿಸಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ರೈತರದ ಭೀಮಶಾ ದೊಂಡಿ, ಪಂಡಿತ ಪೂಜಾರಿ, ಲಕ್ಕಪ್ಪ ಮೇಲಿನಕೇರಿ, ಸಿದ್ದಪ್ಪ ಉದನೂರು, ಗೌಡಪ್ಪ ಶೇಗಜಿ ಇತರರಿದ್ದರು.