ಕಡ್ಡಾಯವಾಗಿ ತ್ಯಾಜ್ಯ ವಿಂಗಡಣೆ ಆಗಲೇಬೇಕು

,
,
Published on

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಪೌರಾಯುಕ್ತ ಚವ್ಹಾಣ್​ ಸೂಚನೆ
  • ನಿಯಮ ಪಾಲಿಸಿ ಬೃಹತ್​ ತ್ಯಾಜ್ಯ ಉತ್ಪಾದಕರು
ಯಾದಗಿರಿ: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ನ ತ್ಯಾಜ್ಯ ನಿರ್ವಹಣಾ ಎಸ್​ಡಬ್ಲುಎಂ ನಿಯಮಗಳು&2006ರ ಅನುಸಾರವಾಗಿ ಎಲ್ಲ ನಾಗರಿಕರು, ವಾಣಿಜ್ಯ ಸಂಸ್ಥೆ, ಶಿಣ ಸಂಸ್ಥೆ, ಅಪಾರ್ಟ್​ಮೆಂಟ್​, ಕೈಗಾರಿಕೆ, ಹೋಟೆಲ್​, ಉಪಹಾರ ಗೃಹ, ಮಾರುಕಟ್ಟೆ ಮತ್ತು ಬೃಹತ್​ ತ್ಯಾಜ್ಯ ಉತ್ಪಾದಕರು ಬಿಡಬ್ಲುಜಿಎಸ್​ ಕಡ್ಡಾಯವಾಗಿ ನಾಲ್ಕು ತರಹದ ತ್ಯಾಜ್ಯ ವಿಂಗಡಣೆಯನ್ನು ಮೂಲದಲ್ಲಿಯೇ ಜಾರಿಗೆ ತರಬೇಕೆಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾನ್​ ಹೇಳಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಎಲ್ಲ ತ್ಯಾಜ್ಯ ಉತ್ಪಾದಕರು ಹಸಿ, ತ್ಯಾಜ್ಯ, ಆಹಾರ ತ್ಯಾಜ್ಯ ತರಕಾರಿ ತ್ಯಾಜ್ಯ ಜೈವಿಕವಾಗಿ ಕರಗುವ ತ್ಯಾಜ್ಯ, ಒಣ ತ್ಯಾಜ್ಯ ಪ್ಲಾಸ್ಟಿಕ್​, ಕಾಗದ, ಲೋಹ, ಗಾಜು ಹಾಗೂ ಮರುಬಳಕೆ ಯೋಗ್ಯ ವಸ್ತುಗಳು. ವಿಶೇಷ ಕಾಳಜಿ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯಡೈಪರ್​ಗಳು, ಬ್ಯಾಟರಿ, ಔಷಧ ಅವಶೇಷಗಳು, ಬಣ್ಣದ ಡಬ್ಬಿಗಳು, ಇ&ತ್ಯಾಜ್ಯ ಇತ್ಯಾದಿ. ಸ್ಯಾನಿಟರಿ ತ್ಯಾಜ್ಯ ಮರುಬಳಕೆಯಾಗದ ಹಾಗೂ ಜೈವಿಕವಾಗಿ ಕರಗದ ತ್ಯಾಜ್ಯ ನಾಗರಿಕರು ವಿಂಗಡಿಸಲಾದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಅಧಿಕೃತ ತ್ಯಾಜ್ಯ ಸಂಗ್ರಹಕಾರರು, ಪೌರಾಕಾರ್ಮಿಕರಿಗೆ ಹಸ್ತಾಂತರಿಸಬೇಕು ಮತ್ತು ತ್ಯಾಜ್ಯ ಮಿಶ್ರಣ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.
ಎಲ್ಲ ಬೃಹತ್​ ತ್ಯಾಜ್ಯ ಉತ್ಪಾದಕರು ಬಿಡಬ್ಲುಜಿಎಸ್​ ಅಪಾರ್ಟ್​ ಮೆಂಟ್​ಗಳು, ವಸತಿ ಸಮುಚ್ಚಯಗಳು, ಹೋಟೆಲ್​ಗಳು ಮತ್ತು ಉಪಹಾರ ಗೃಹಗಳು, ಕಲ್ಯಾಣ ಮಂಟಪಗಳು, ಶಿಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆಗಳು, ಮಂಡಿಗಳು, ಕೈಗಾರಿಕೆಗಳು ಮತ್ತು ಕಚೇರಿಗಳು 20,000 ಚಮೀಗಿಂತ ಹೆಚ್ಚಿನ ನಿರ್ಮಿತ ಪ್ರದೇಶ ಹೊಂದಿದಲ್ಲಿ ಅಥವಾ ದಿನಕ್ಕೆ 40 ಕೆಎಲ್​ಡಿಗಿಂತ ಹೆಚ್ಚಿನ ನೀರಿನ ಬಳಕೆ, ಅಥವಾ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆ ಇದ್ದಲ್ಲಿ, ತಮ್ಮ ಸಂಸ್ಥೆಯನ್ನು ನಗರ ಸ್ಥಳಿಯ ಸಂಸ್ಥೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಎಸ್​ಡಬ್ಲುಎಂನಿಯಮಗಳು&2026ರ ಪ್ರಕಾರ ತ್ಯಾಜ್ಯದ ವೈಾನಿಕ ವಿಲೇವಾರಿ ಮತ್ತು ನಿರ್ವಹಣೆಯನ್ನು ಅನುಸರಿಸಬೇಕು. ನಿಯಮಗಳು ಉಲ್ಲಂನೆ ಮಾಡಿದಲ್ಲಿ ದಂಡ ಹಾಕಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಸ್ವಚ್ಛತೆ ಪರಿಸರ ಸಂರಣೆ ಹಾಗೂ ಶಾಶ್ವತ ನ ತ್ಯಾಜ್ಯ ನಿರ್ವಹಣೆಗೆ ಎಲ್ಲ ನಾಗರಿಕರು ಹಾಗೂ ಸಂಸ್ಥೆಗಳು ಸಹಕರಿಸುವಂತೆ ವಿನಂತಿಸಿದೆ ಎಂದು ಅವರು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net