ಮಾನಸಿಕ ಆರೋಗ್ಯ ಸೇವೆ ಕುರಿತು ಜನರಿಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಅಭಿಯಾನದಲ್ಲಿ ಅಂದು ಬೆಳಗ್ಗೆ 9ಕ್ಕೆ ನಿಮ್ಹಾನ್ಸ್‌ನ ಡಾ. ಎಂ.ವಿ. ಗೋವಿಂದಸ್ವಾಮಿ ಕೇಂದ್ರದಿಂದ ನಡಿಗೆ ಪ್ರಾರಂಭವಾಗಲಿದೆ. ಈ ವೇಳೆ ನಿಮ್ಹಾನ್ಸ್ ಕ್ಯಾಂಪಸ್‌ನ ವಿಶೇಷತೆಗಳನ್ನು ಸಂಸ್ಥೆಯ ವೈದ್ಯರು ಪರಿಚಯಿಸಲಿದ್ದಾರೆ. ಮಾನಸಿಕ ರೋಗಿಗಳ ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್‌ಗಳನ್ನು ವೀಕ್ಷಿಸುವ ಜತೆಗೆ ವೈದ್ಯರು, ರೋಗಿಗಳ ಜತೆಗೆ ಸಮಾಲೋಚನೆ ನಡೆಸಬಹುದು. ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದು. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಚಿಕಿತ್ಸಾ ವಿಭಾಗ, ಉದ್ಯಾನ, ಮ್ಯೂಸಿಯಂ, ಯೋಗ ಸೇರಿ ವಿವಿಧ ಕೇಂದ್ರಗಳ ಕಾರ್ಯವೈಖರಿ ಬಗ್ಗೆ ವೈದ್ಯರು ಮಾಹಿತಿ ನೀಡಲಿದ್ದಾರೆ.