ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲಸಚಿವ(ಆಡಳಿತ) ಪ್ರೊ.ಪ್ರಸಾದ ಬಿ.ರಾಂಪುರೆ ಮತ್ತು ಗೂಗಲ್ ಫಾರ್ ಎಜುಕೇಷನ್ ಇಂಡಿಯಾ ಕಂಪನಿಯ ಮುಖ್ಯಸ್ಥ ಸಂಜಯ್ ಜೈನ್ ಪರಸ್ಪರ ಒಪ್ಪಂದಕ್ಕೆ ಸಹಿ
ಕೃತಕ ಬುದ್ಧಿಮತ್ತೆ (ಎಐ) ಕೌಶಲ, ಬೋಧಕರಿಗೆ ಕೌಶಲ ಶಿಕ್ಷಣ, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಕೈಗಾರಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು, ಉದ್ಯೋಗಕ್ಕೆ ಬೇಕಾದ ತರಬೇತಿ ನೀಡುವುದು ಈ ಒಪ್ಪಂದದ ಉದ್ದೇಶ
ಕ್ವಾಲ್ಕಮ್ ಕಂಪನಿಯ ಅಂಗ ಸಂಸ್ಥೆಯಾದ ಸ್ಟೆಮ್ ಲೋರ್ ಇನ್ನೋವೇಟರ್ಸ್ ಎಲ್‌ಎಲ್‌ಪಿ ಜತೆಗಿನ ಒಪ್ಪಂದವು ‘ಎಡ್ಜ್ ಎಐ ವಿಷಯದಲ್ಲಿ ಸೆಂಟರ್ ಆಫ್ ಎಕ್ಸನೆಲ್ಸ್’
ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ, ಪ್ಲೇಸ್‌ಮೆಂಟ್ ಹಾಗೂ ಪ್ರಾಯೋಗಿಕ ಶಿಕ್ಷಣಕ್ಕಾಗಿ ಗೂಗಲ್ ಹಾಗೂ ಕ್ವಾಲ್ಕಾಮ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತು.
ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲಸಚಿವ(ಆಡಳಿತ) ಪ್ರೊ.ಪ್ರಸಾದ ಬಿ.ರಾಂಪುರೆ ಮತ್ತು ಗೂಗಲ್ ಫಾರ್ ಎಜುಕೇಷನ್ ಇಂಡಿಯಾ ಕಂಪನಿಯ ಮುಖ್ಯಸ್ಥ ಸಂಜಯ್ ಜೈನ್ ಪರಸ್ಪರ ಒಪ್ಪಂದಕ್ಕೆ ಸಹಿಹಾಕಿದರು.
ಕೃತಕ ಬುದ್ಧಿಮತ್ತೆ (ಎಐ) ಕೌಶಲ, ಬೋಧಕರಿಗೆ ಕೌಶಲ ಶಿಕ್ಷಣ, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಕೈಗಾರಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು, ಉದ್ಯೋಗಕ್ಕೆ ಬೇಕಾದ ತರಬೇತಿ ನೀಡುವುದು ಈ ಒಪ್ಪಂದದ ಉದ್ದೇಶವಾಗಿದೆ.
ಕ್ವಾಲ್ಕಮ್ ಕಂಪನಿಯ ಅಂಗ ಸಂಸ್ಥೆಯಾದ ಸ್ಟೆಮ್ ಲೋರ್ ಇನ್ನೋವೇಟರ್ಸ್ ಎಲ್‌ಎಲ್‌ಪಿ ಜತೆಗಿನ ಒಪ್ಪಂದವು ‘ಎಡ್ಜ್ ಎಐ ವಿಷಯದಲ್ಲಿ ಸೆಂಟರ್ ಆಫ್ ಎಕ್ಸನೆಲ್ಸ್’ ಪ್ರಾರಂಭಿಸುವುದಾಗಿದೆ.
ಭಾರತ್ ಸ್ಕಿಲ್ಸ್ ಫೌಂಡೇಷನ್ ಜತೆ 20 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ಕೌಶಲದ ಬಗ್ಗೆ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಲಿದೆ.
ಕಾರ್ಯಕ್ರಮದಲ್ಲಿ ವಿಟಿಯು ವಿಶೇಷಾಧಿಕಾರಿ ಡಾ. ಅಜಿತ್ ಪದ್ಯಾಣ, ಪ್ರಾದೇಶಿಕ ಕಚೇರಿ ನಿರ್ದೇಶಕ ಡಾ. ಎಚ್.ಆರ್. ಸುದರ್ಶನ ರೆಡ್ಡಿ, ಕ್ಯೂಸ್ಪೈಡರ್ ಕಂಪನಿಯ ಸಿಇಒ ಗಿರೀಶ್ ರಾಮಣ್ಣ ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಇ- ಲರ್ನಿಂಗ್ ಕೇಂದ್ರ
ಮೈಸೂರಿನ ಇ-ಲರ್ನಿಂಗ್ ಕೇಂದ್ರದ ಮೂಲಕ ಅತ್ಯಾಧುನಿಕ ಡಿಜಿಟಲ್ ಕಲಿಕಾ ವೇದಿಕೆಯನ್ನು ಆರಂಭಿಸಲಾಯಿತು, ಇಲ್ಲಿ ಸಿಮ್ಯುಲೇಷನ್ ಮೂಲಕ ಅನುಭವ ಆಧಾರಿತ ಕಲಿಕೆಯನ್ನು ಮಾಡಲಾಗುತ್ತದೆ. ಇಂಜಿನಿಯರಿಂಗ್, ಎಂಬಿಎ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.