ಕಲಬುರಗಿ ಎನ್ವಿ ಕಾಲೇಜು ಬಯಲು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ವಿಠ್ಠಲ್ ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಧಕರಾದ ಡಾ.ಶುಭಾಂಗಿ ಸುಧೀಂದ್ರ, ಮಾನಯ್ಯ ಬಡಿಗೇರ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಡಾ.ಬಸವರಾಜ ಪಾಟೀಲ್ ಸೇಡಂ, ಡಾ.ಸ್ವಾಮಿರಾವ್ ಕುಲಕರ್ಣಿ, ಮಹಿಪಾಲರಡ್ಡಿ ಮುನ್ನೂರ್, ನಾರಾಯಣ ಕುಲಕರ್ಣಿ, ಚಿತ್ರಾ ವಿಠ್ಠಲರಾವ ಕುಲಕರ್ಣಿ, ಶ್ರೀಪತಿ ಕುಲಕರ್ಣಿ ಇತರರಿದ್ದರು.
ಕಲಬುರಗಿ: ಸಂಬಂಧಗಳು ದೂರವಾಗುತ್ತಿರುವ ಕಾಲಮಾನದಲ್ಲಿ ವಿಠ್ಠಲ್ ತಲೆಖಾನ್ ಅವರು ಪರಿವಾರ ಜತೆ ಸಮಾಜ ಪ್ರೀತಿಯೊಂದಿಗೆ ಮಾನವೀಯ ಮೌಲ್ಯದ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ಪ್ರತಿಭಾ ಸಂಪನ್ನರಾಗಿದ್ದರು ಎಂದು ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ಬಣ್ಣಿಸಿದರು.
ನೂತನ ವಿದ್ಯಾಲಯದ ಪದವಿ ಕಾಲೇಜು ಬಯಲು ರಂಗಮಂದಿರದಲ್ಲಿ ಶಿರಪುರ ಪ್ರಕಾಶನ ಹಾಗೂ ಬೆಂಗಳೂರಿನ ವಿಠ್ಠಲ್ ಪ್ರತಿಷ್ಠಾನ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ವಿಠ್ಠಲ್ ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಬಂಧಗಳು ದೂರವಾಗಿ ಕುಟುಂಬ ಮತ್ತು ಸಮಾಜ ಪ್ರೀತಿಯಿಂದ ವಂಚಿತರಾಗುತ್ತಿರುವ ಕಾಲಟ್ಟದಲ್ಲಿ ಇಂತಹ ಮಾದರಿ ವ್ಯಕ್ತಿತ್ವದವರ ಸಂಸ್ಮರಣೆ ಮೂಲಕ ಮನಸ್ಸು ಮತ್ತು ಸಮಾಜ ಜೋಡಣೆ ಕಾರ್ಯ ನೆರವೇರುತ್ತಿರುವುದು ಸಂತಸದ ವಿಷಯ ಎಂದರು.
ಕೃತಿಯನ್ನು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಪರಿಚಯಿಸಿ ವಿಠ್ಠಲ್ ಕುಲಕರ್ಣಿ ವ್ಯಕ್ತಿತ್ವ, ಬದುಕು ಮತ್ತು ಸಾಧನೆ ಸಾಹಿತಿ ಸಂಟಕರು ಹಾಗೂ ಪ್ರಾಮಾಣಿಕ, ಸಮಾಜಮುಖಿ ಜೀವನಕ್ಕೆ ಆದರ್ಶವಾಗಿದೆ ಎಂದು ಹೇಳಿದರು.
ಗ್ರಂಥ ಪ್ರಧಾನ ಸಂಪಾದಕ ಡಾ.ಸ್ವಾಮಿರಾವ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಚಿತ್ರಾ ವಿಠ್ಠಲರಾವ ಕುಲಕರ್ಣಿ, ಶ್ರೀಪತಿ ಕುಲಕರ್ಣಿ ಇತರರಿದ್ದರು. ವಿನಯ ಕುಲಕರ್ಣಿ ಪ್ರಾರ್ಥನೆಗೀತೆ ಹಾಡಿದರು. ಅಥರ್ವ ದೇಶಪಾಂಡೆ ಭಗವದ್ಗೀತೆ ಶ್ಲೋಕ ಪಠಿಸಿದರು. ನಾರಾಯಣ ಕುಲಕರ್ಣಿ ನಿರೂಪಣೆ ಮಾಡಿದರು. ಓಂಕಾರ ನಿತ್ಯ ಸಾಧನಾ ತಂಡದ ನಿರ್ದೇಶಕಿ ಡಾ.ಶುಭಾಂಗಿ ಹಾಗೂ ಶಿಲ್ಪಕಲಾ ೇತ್ರದ ಸಾಧಕ ಡಾ.ಮಾನಯ್ಯ ಬಡಿಗೇರ ಅವರಿಗೆ ವಿಠ್ಠಲ ಪ್ರಶಸ್ತಿ, 5000 ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಓಂಕಾರ ನೃತ್ಯ ಸಾಧನಾ ಕಲಾ ತಂಡದ ಕಲಾವಿದರು ವಿಶೇಷ ನೃತ್ಯ ಪ್ರದರ್ಶನ ನೀಡಿದರು. ಡಾ.ಮಹೇಶಕುಮಾರ ಬಡಿಗೇರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
"
ಸಮಾಜದಲ್ಲಿ ಸಾಂಸತಿಕ ಪ್ರೀತಿ ಕಟ್ಟಿದ ಮಹನೀಯರ ಸ್ಮರಣೆ ಮಾಡಿ ಯುವಜನರ ಆಶಾದಾಯಕ ಬದುಕಿಗೆ ಪ್ರೇರಣೆ ನೀಡುವಂತಾಗಿದೆ. ಆದರ್ಶ ಮತ್ತು ಮೌಲ್ಯವನ್ನು ಬಿಂಬಿಸುವ ಕಾರ್ಯಕ್ರಮ ಇದಾಗಿದೆ.