ವಿಠ್ಠಲ&ರುಕ್ಮಿಣಿ ರಥೋತ್ಸವ

ರಾಮದುರ್ಗದಲ್ಲಿ ನಾರಾಯಣ ಪೇಟೆಯ ಪಾಂಡುರಂಗ ದೇವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ರಾಮದುರ್ಗದಲ್ಲಿ ನಾರಾಯಣ ಪೇಟೆಯ ಪಾಂಡುರಂಗ ದೇವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on
ರಾಮದುರ್ಗ: ನಗರದ ನಾರಾಯಣ ಪೇಟೆಯ ವಿಠ್ಠಲ ಹರಿಮಂದಿರದಲ್ಲಿ ಸಪ್ತಾಹ ಮಹೋತ್ಸವ ಹಾಗೂ ಪಾಂಡುರಂಗ ದೇವರ ರಥೋತ್ಸವ ಭಕ್ತರ ಹಷೋರ್ದ್ಗಾರದ ಮಧ್ಯೆ ಬುಧವಾರ ಸಂಪನ್ನಗೊಂಡಿತು. ಒಂದು ವಾರದಿಂದ ಸಪ್ತಾಹ ಆಚರಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಕೀರ್ತನೆ ವೈಭವದಿಂದ ಜರುಗಿವು. ಪಾಂಡುರಂಗ ರುಕ್ಮಿಣಿ ದೇವರ ರಥೋತ್ಸವದ ಅಂಗವಾಗಿ ಸಂತರ ದಿಂಡಿ ನಗರ ಪ್ರದಣೆ ಹಾಕಿ ರಥೋತ್ಸವದಲ್ಲಿ ಪಾಲ್ಗೊಂಡಿತು. ಸುಮಂಗಲೆಯರ ಆರತಿಯೊಂದಿಗೆ ಪಲ್ಲಕ್ಕಿ ಉತ್ಸವ, ಮೆರವಣಿಗೆ ಹಾಗೂ ವಾರಕರಿ ಸಂಪ್ರದಾಯದ ಸಂತರ ಭಜನೆ ಜರುಗಿತು. ಭಕ್ತರು ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಹರಕೆ ತೀರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net