ಕೆಕೆಆರ್ಡಿಬಿ ಅಪರ ನಿರ್ದೇಶಕಿ ಪ್ರವಿಣಪ್ರಿಯಾ ಅವರು ಮಂಡಳಿಗೆ ಕಳೆದ 2013&14 ರಿಂದ 2025&26ರ ವರೆಗೆ ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆ, ಖರ್ಚು, ವಲಯಯವಾರು ಪ್ರಗತಿ ಕುರಿತು ವಿವರಣೆ ನೀಡಿ, ಈವರೆಗೆ ಬಿಡುಗಡೆಯಾದ 23,704 ಕೋಟಿ ರೂ. ಅನುದಾನದಲ್ಲಿ 17,105 ಕೋಟಿ ರೂ. ಖರ್ಚು ಮಾಡಿದ್ದು, 45,066 ಕಾಮಗಾರಿಗಳ ಪೈಕಿ 36,072 ಪೂರ್ಣಗೊಳಿಸಲಾಗಿದೆ. ಇದರಲ್ಲಿ ಬೀದರ ಜಿಲ್ಲೆಗೆ 3,007 ಕೋಟಿ ರೂ., ಕಲಬುರಗಿ ಜಿಲ್ಲೆಗೆ 4,559.39 ಕೋಟಿ ರೂ., ಯಾದಗಿರಿಗೆ 2,417.06 ಕೋಟಿ ರೂ., ರಾಯಚೂರು ಜಿಲ್ಲೆಗೆ 3,784.30 ಕೋಟಿ ರೂ., ಕೊಪ್ಪಳ ಜಿಲ್ಲೆಗೆ 2,778.35 ಕೋಟಿ ರೂ., ಬಳ್ಳಾರಿ ಜಿಲ್ಲೆಗೆ 1482.49 ಕೋಟಿ ರೂ., ವಿಜಯನಗರ ಜಿಲ್ಲೆಗೆ 1,954.18 ಕೋಟಿ ರೂ. ಹಾಗೂ ಪ್ರದೇಶಕ್ಕೆ ಸೀಮಿತವಾದ ಬೃಹತ್ ಯೋಜನೆಗಳಿಗೆ 1,721 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.