ವಿಕಾಸಸೌಧ ಕ್ಯಾಂಟೀನ್‌ಗೆ ಬೀಗ

Private hospital canteen Review
Private hospital canteen Review
Published on

ಪ್ರಮುಖ ಮುಖ್ಯಾಂಶಗಳು

  • * ತಟ್ಟೆಗಳಲ್ಲಿ ಜಿರಳೆ, ನೈರ್ಮಲ್ಯದ ಕೊರತೆ ಕಾರಣ

ಬೆಂಗಳೂರು: ತಟ್ಟೆಗಳ ಮೇಲೆ ಜಿರಳೆಗಳ ಹರಿದಾಟ, ನೈರ್ಮಲ್ಯದ ಕೊರತೆ ಹಿನ್ನೆಲೆಯಲ್ಲಿ ವಿಕಾಸ ಸೌಧ ಕ್ಯಾಂಟೀನ್‌ಗೆ ತಾತ್ಕಾಲಿಕವಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಆಡುಗೆ ಕೋಣೆಯಲ್ಲಿ ಸರಿಯಾದ ಸ್ವಚ್ಛತೆ ಕಾಪಾಡದಿರುವುದು ಮತ್ತು ಕೀಟ ನಿಯಂತ್ರಣ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದ್ದು, ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಬಾಗಿಲ ಮೇಲೆ ನಾಮಲಕ ಅಂಟಿಸಲಾಗಿದೆ. ನಿಯಮ ಉಲ್ಲಂಘನೆ ಸಂಬಂಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.
ಗುರುವಾರವೂ ದಾಳಿ ಮುಂದುವರಿಸಿದ ಆಹಾರ ಸುರಕ್ಷತೆ ಅಧಿಕಾರಿಗಳು, ನಗರದ ಬಿ.ಜಿ. ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್ ಪರಿಶೀಲಿಸಿದ್ದಾರೆ. ಈ ವೇಳೆ ಅವಧಿ ಮೀರಿದ ಹಾಗೂ ಕೆಟ್ಟ ಆಹಾರ ಪದಾರ್ಥಗಳು ಪತ್ತೆಯಾಗಿವೆ. ರವಾ, ಸಕ್ಕರೆ ಪುಡಿ, ಮೈದಾ ಹಾಗೂ ಬೇಕರಿ ಉತ್ಪನ್ನಗಳು ಜತೆಗೆ 4 ಪ್ಯಾಕೆಟ್ ಮಿಕ್ಸ್‌ಚರ್, 9 ಪ್ಯಾಕೆಟ್ ಪಾನಿಪೂರಿ, ಒಣಗಿದ ಬ್ರೆಡ್, 5 ಪ್ಯಾಕೆಟ್ ಮೆಂತ್ಯ ಸೊಪ್ಪು, ಬಟಾಣಿ, ಹೆಸರು ಬೇಳೆಗಳು ಪತ್ತೆಯಾಗಿವೆ. ಈ ಸಂಬಂಧ ಕಾನೂನು ಕ್ರಮ ವಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net