ಬೆಂಗಳೂರು: ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಕಣದಲ್ಲಿ ಎಂಟು ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಆದ್ದರಿಂದ ಬಿಜೆಪಿಯ ಉಚ್ಚಾಟಿತ ಮತ್ತು ಪಕ್ಷೇತರ ಶಾಸಕರ ಮೇಲೆ ಎಲ್ಲರ ಗಮನ ಸೆಳೆದಿದೆ.
ಏಳು ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 8 ನಾಮಪತ್ರಗಳೂ ಅಂಗೀಕಾರವಾಗಿವೆ. ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ವಿನಯ್ ಕಾರ್ತಿಕ್ ಪ್ರಕಾಶ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್ ಹಾಗೂ ಬಿಜೆಪಿಯ ಆರ್.ರಘು, ಲಿಂಗರಾಜ ಪಾಟೀಲ್ ಹಾಗೂ ಜೆಡಿಎಸ್‌ನ ಗೋವಿಂದರಾಜು ನಾಮಪತ್ರ ಸಿಂಧುವಾಗಿವೆ.
ಇದರಲ್ಲಿ ಕಾಂಗ್ರೆಸ್‌ನ ನಾಲ್ವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲವು ಸುಲಭವಾಗಿದೆ. ಉಳಿದಂತೆ ಕಾಂಗ್ರೆಸ್‌ನ ಓರ್ವ ಹಾಗೂ ಜೆಡಿಎಸ್‌ನ ಗೋವಿಂದರಾಜು ಗೆಲುವಿಗೆ ಹೋರಾಟ ನಡೆಯಲಿದೆ. ಕಾಂಗ್ರೆಸ್‌ನಲ್ಲಿ 5ನೇ ಅಭ್ಯರ್ಥಿಯ ಜಯ ಸುಲಭವಲ್ಲ. ಇವರಿಗೂ ಆರು ಮತ ಕಡಿಮೆಯಾಗಲಿವೆ. ಒಟ್ಟಾರೆಯಾಗಿ 7ನೇ ಸ್ಥಾನ ಯಾವ ಪಕ್ಷದ ಪಾಲಾಗುತ್ತದೆ ಎಂಬುದನ್ನು ಜೂನ್ 19ರವರೆಗೂ ಕಾದುನೋಡಬೇಕಿದೆ.